ಸೈಬರ್ ದಾಳಿ ಸೇಡು ವಿರುದ್ಧ : 35 ರಷ್ಯಾ ಅಧಿಕಾರಿಗಳ ಉಚ್ಚಾಟನೆ ಮಾಡಿದ ಅಮೆರಿಕ

ಈ ಸುದ್ದಿಯನ್ನು ಶೇರ್ ಮಾಡಿ

America-01

ವಾಷಿಂಗ್ಟನ್, ಡಿ.30-ಅಮೆರಿಕ ಅಧ್ಯಕ್ಷೀಯ ಚುನಾವಣೆಗಳ ವೇಳೆ ನಡೆಸಲಾದ ಸೈಬರ್ ದಾಳಿಗೆ ರಷ್ಯಾ ವಿರುದ್ಧ ಸರಣಿ ದಿಗ್ಬಂಧನಗಳ ಪ್ರತೀಕಾರ ಕೈಗೊಂಡಿರುವ ಅಧ್ಯಕ್ಷ ಬರಾಕ್ ಒಬಾಮಾ 35 ರಷ್ಯನ್ ಅಧಿಕಾರಿಗಳನ್ನು ಉಚ್ಚಾಟಿಸಿದ್ದಾರೆ.   ರಷ್ಯಾ ಕೈಗೊಂಡ ಸೈಬರ್ ದಾಳಿ ಕುತಂತ್ರದಿಂದಾಗಿ ಅಮೆರಿಕನ್ನರೆಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿಕೆ ನೀಡಿರುವ ಓಬಾಮಾ, ನಿನ್ನೆಯಿಂದ ರಷ್ಯಾದೊಂದಿಗಿನ ಅಮೆರಿಕ ಬಾಂಧವ್ಯಕ್ಕೆ ಸಂಬಂಧಿಸಿದಂತೆ ಕೆಲವು ದಿಗ್ಬಂಧನಗಳನ್ನು ಹೇರಿದ್ದಾರೆ. ಇಂದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅಮೆರಿಕ ಅಧ್ಯಕ್ಷರು ತಮ್ಮ ದೇಶದಲ್ಲಿನ 35 ರಷ್ಯಾ ಅಧಿಕಾರಿಗಳನ್ನು ಉಚ್ಚಾಟನೆ ಮಾಡಿದ್ದಾರೆ.

ಟ್ರಂಪ್ ಅಸಮಾಧಾನ :

ರಷ್ಯಾ ವಿರುದ್ಧ ಓಬಾಮಾ ಕೈಗೊಂಡಿರುವ ಕ್ರಮಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಸಂಬಂಧ ಮುಂದಿನ ವಾರ ಭೇಟಿ ಮಾಡಿ ಹೆಚ್ಚಿನ ಮಾಹಿತಿ ಪಡೆಯಲಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin