ಇಂದು ಹೊಸ ವರ್ಷದ ಮೊದಲ ದಿನ, ಹೇಗಿದೆ ನಿಮ್ಮ ರಾಶಿಭವಿಷ್ಯ (01-01-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ದೇಹ ಶಿಥಿಲವಾಯಿತು. ತಲೆ ನೆರೆಯಿತು. ಬಾಯಲ್ಲಿ ಹಲ್ಲಿಲ್ಲವಾಯಿತು. ಆದರೆ ಮುದುಕನು ದೊಣ್ಣೆಯನ್ನು ಹಿಡಿದು ಹೋಗು ತ್ತಾನೆ. ಆದರೆ ಆಸೆ ಇವನನ್ನು ಇನ್ನೂ ಬಿಡದು.  – ಭಜಗೋವಿಂದಸ್ತೋತ್ರ

Rashi

ಪಂಚಾಂಗ : ಭಾನುವಾರ , 01.01.2017

ಸೂರ್ಯ ಉದಯ  ಬೆ.06.42 / ಸೂರ್ಯ ಅಸ್ತ ಸಂ.06.05
ಚಂದ್ರ ಉದಯ ಬೆ.08.53 / ಚಂದ್ರ ಅಸ್ತ ರಾ.08.48
ದುರ್ಮುಖಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ: ತೃತೀಯಾ  (ಮ.03.34)
ನಕ್ಷತ್ರ: ಶ್ರವಣ (ಸಾ.04.01) / ಯೋಗ: ಹರ್ಷಣ (ಬೆ.09.26) / ಕರಣ: ಗರಜೆ-ವಣಿಜ್  (ಮ.03.34-ರಾ.03.45)
ಮಳೆ ನಕ್ಷತ್ರ: ಮೂಲ  / ಮಾಸ: ಧನಸ್ಸು / ತೇದಿ: 18

ರಾಶಿ ಭವಿಷ್ಯ :

ಮೇಷ : ಒಳ್ಳೆಯ ನಿಷ್ಪೃಹತೆಯಿಂದ ಕೆಲಸ ಮಾಡುವಿರಿ, ಶತ್ರುಗಳಿಗೆ ಬಿಸಿ ಮುಟ್ಟಿಸುವ ಸಂದರ್ಭಗಳು ಎದುರಾಗುವುವು
ವೃಷಭ : ಹಣಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ
ಮಿಥುನ: ಗ್ರಹಿಸಿದ ಕೆಲಸ-ಕಾರ್ಯಗಳು ನೆರವೇರ ಲಿವೆ, ಆದಾಯಕ್ಕೆ ಹೆಚ್ಚು ಕೊರತೆಯಾಗುವುದಿಲ್ಲ
ಕಟಕ: ಮಿತ್ರರ ಸಹಕಾರದಿಂದ ನೆಮ್ಮದಿ, ಸಾಂಸಾರಿಕವಾಗಿ ಭೋಗ ಜೀವನಕ್ಕೆ ಧನವ್ಯಯವಾಗಲಿದೆ
ಸಿಂಹ: ಮನೆಯಲ್ಲಿ ಧರ್ಮ ಕಾರ್ಯ ಗಳು ನಿರ್ವಿಘ್ನವಾಗಿ ನಡೆಯಲಿವೆ
ಕನ್ಯಾ: ಆಭರಣ, ಅಲಂಕಾರಿಕ ವಸ್ತುಗಳ ಖರೀದಿಗಾಗಿ ಧನ ವ್ಯಯ, ಶುಭವಾರ್ತೆ ಕೇಳುವಿರಿ
ತುಲಾ: ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ
ವೃಶ್ಚಿಕ : ಅವಿವಾಹಿತರು ವೈವಾಹಿಕ ಭಾಗ್ಯ ಹೊಂದಲಿದ್ದಾರೆ, ಸಂಚಾರದಲ್ಲಿ ಕಾರ್ಯಸಿದ್ಧಿ
ಧನುಸ್ಸು: ಅಡ್ಡಿ-ಆತಂಕಗಳ ನಡುವೆ ಕಾರ್ಯಸಾಧನೆ ಯಾಗಲಿದೆ, ದೇವರ ಅನುಗ್ರಹಕ್ಕಾಗಿ ಪ್ರಾರ್ಥಿಸಿರಿ
ಮಕರ: ಹೊಸ ಚಿಂತನೆ, ವಿಚಾರಗಳ ಆವಿಷ್ಕಾರವಾಗಲಿದೆ
ಕುಂಭ: ಹಿರಿಯರ ಸೂಕ್ತ ಮಾರ್ಗದರ್ಶನ ಅಗತ್ಯ
ಮೀನ: ನಿರೀಕ್ಷಿತ ಕೆಲಸ-ಕಾರ್ಯಗಳಿಗೆ ಅನುಕೂಲವಾಗಲಿದೆ

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin