ನಿರ್ಮಾಪಕ, ನಿರ್ದೇಶಕ, ಗೌರಿ ಸುಂದರ್ ವಿಧಿವಶ

ಈ ಸುದ್ದಿಯನ್ನು ಶೇರ್ ಮಾಡಿ

Sudar

ಬೆಂಗಳೂರು,ಜ.1-ಕನ್ನಡ ಚಲನಚಿತ್ರರಂಗದ ಖ್ಯಾತ ನಿರ್ಮಾಪಕ, ನಿರ್ದೇಶಕ ಹಾಗೂ ಛಾಯಾಗ್ರಾಹಕ ಗೌರಿ ಸುಂದರ್(64) ಹೃದಯಾಘಾತದಿಂದ ಇಂದು ಮುಂಜಾನೆ 3 ಗಂಟೆಯಲ್ಲಿ ವಿಧಿವಶರಾಗಿದ್ದಾರೆ. ಸಿನಿಮಾ ರಂಗ ಅಲ್ಲದೆ ಸುಂದರ ಪ್ರಕಾಶನದ ಜೀವಾಳವಾಗಿದ್ದ ಗೌರಿಸುಂದರ್ ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಪತ್ನಿ ಹಾಗೂ ಪುತ್ರಿಯರಾದ ಕಿರುತೆರೆ ಕಲಾವಿದೆ ಚಿತ್ರಶ್ರೀ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಮಾನಸಿ ಸೇರಿದಂತೆ ಕುಟುಂಬ ವರ್ಗವನ್ನು ಅಗಲಿದ್ದಾರೆ.

ಸುಂದರ ಪ್ರಕಾಶನ ಅಡಿ 397 ಕೃತಿಗಳನ್ನು ಅಲ್ಪಾವಧಿಯಲ್ಲಿ ಹೊರ ತಂದಿದ್ದ ಇವರು, 400ನೇ ಪುಸ್ತಕ ಹೊರತರುವ ಹೊಸ್ತಿಲಲ್ಲಿ ಸಾಹಿತ್ಯ ಲೋಕವನ್ನು ಅಗಲಿದ್ದಾರೆ. ಯುವ ಬರಹಗಾರರು, ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ಜನಪ್ರಿಯರಾಗಿದ್ದರು.

ಹೊಸ ವರ್ಷದ ಮುನ್ನಾ ದಿನ ಪದ್ಮನಾಭನಗರದ ರೀಜನಲ್ ಇನ್‍ಸ್ಟಿಟ್ಯೂಟ್ ಆಫ್ ಕೋಆಪರೇಟಿವ್ ಮ್ಯಾನೇಜ್‍ಮೆಂಟ್‍ನ ಸಂಸ್ಕೃತಿ ಸಭಾಂಗಣದಲ್ಲಿ ಬರೋಬ್ಬರಿ 13 ಕೃತಿಗಳ ಲೋಕಾರ್ಪಣೆ ಹಾಗೂ ಊಟದ ವ್ಯವಸ್ಥೆ ಆಯೋಜಿಸಿದ್ದ ಗೌರಿ ಸುಂದರ್ ಎಲ್ಲರಿಗೂ ಇಲ್ಲಿಯೇ ಇದ್ದು ಊಟ ಮಾಡಿ, ಸಿಹಿ ತಿಂದು ಹೊಸ ವರ್ಷ ಆಚರಿಸೋಣ. ಎಲ್ಲಾ ಊಟ ಮಾಡಿ ಹೋಗಿ ಎಂದು ಹೇಳಿ ಮನೆಗೆ ತೆರಳಿದ್ದರು ಎನ್ನಲಾಗಿದೆ.

ಆದರೆ ಒಂದು ಸಾರ್ಥಕ ಸಂಜೆಯನ್ನು ಸಮಾರಂಭದ ಮೂಲಕ ಆಯೋಜಿಸಿದ್ದ ಹಿರಿಯ ಸಾಹಿತಿ ದೊಡ್ಡರಂಗೇಗೌಡರ ಕೃತಿಯೂ ಸೇರಿದಂತೆ 13 ಪುಸ್ತಕಗಳ ಲೋಕಾರ್ಪಣೆ ಸಮಾರಂಭಕ್ಕೆ ಸಾಕ್ಷಿಯಾಗಿದ್ದ ಗೌರಿ ಸುಂದರ್ ಮಧ್ಯರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ತಮ್ಮ ಜೀವಿತಾವಧಿಯ ಕೊನೆಯ ಸಮಯದವರೆಗೂ ಯುವ ಬರಹಗಾರರು, ಸಾಹಿತ್ಯದ ಕುರಿತು ಅವರು ವ್ಯಕ್ತಪಡಿಸಿದ್ದ ಕಾಳಜಿಗೆ ನಿನ್ನೆಯ ಸಂಜೆಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದೊಡ್ಡರಂಗೇಗೌಡ, ಪ್ರೊ. ಚಂದ್ರಶೇಖರ್ ಪಾಟೀಲ್, ನಿರ್ದೇಶಕ ಟಿ.ಎಸ್. ನಾಗಾಭರಣ, ನಟ ಸುಂದರ್‍ರಾಜ್, ಡಾ. ವತ್ಸಲಾ ಮೋಹನ್, ನಿರ್ಮಾಪಕ ಚಿನ್ನೇಗೌಡ್ರು, ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್, ಗಾಯಕ ಶಿವಮೊಗ್ಗ ಸುಬ್ಬಣ್ಣ, ಕವಿ ಬಿ.ಆರ್. ಲಕ್ಷ್ಮಣ್‍ರಾವ್ ಮತ್ತಿತರರು ಸಾಕ್ಷಿಯಾದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin