ಬೆಂಗಳೂರಿನ ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಪ್ರವೀಣ್ ಸೂದ್

ಈ ಸುದ್ದಿಯನ್ನು ಶೇರ್ ಮಾಡಿ

Blr-Police

ಬೆಂಗಳೂರು, ಜ.1-ನಾಗರಿಕ ಕೇಂದ್ರೀಕೃತ ಪೊಲೀಸ್ ವ್ಯವಸ್ಥೆ ರೂಪಿಸುವುದು ನಮ್ಮ ಮೊದಲ ಆದ್ಯತೆ ಎಂದು ಬೆಂಗಳೂರು ನಗರ ನೂತನ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಇಂದಿಲ್ಲಿ ತಿಳಿಸಿದ್ದಾರೆ.  ಮೇಘರಿಕ್ ಅವರಿಂದ ಅಧಿಕಾರ ಸ್ವೀಕರಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ, ಮಕ್ಕಳಿಗೆ, ಹಿರಿಯ ನಾಗರಿಕರಿಗೆ ರಕ್ಷಣೆ ನೀಡುವುದು ನಮ್ಮ ಆದ್ಯ ಕರ್ತವ್ಯ. ಅದಕ್ಕೆ ಬದ್ಧರಾಗಿ ಕೆಲಸ ಮಾಡುತ್ತೇನೆ. ಅತ್ಯಾಚಾರ ಪ್ರಕರಣಗಳೂ ಸೇರಿದಂತೆ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಕೊಡಿಸುವುದು ನಮ್ಮ ಜವಾಬ್ದಾರಿ. ಅದನ್ನು ನಿಭಾಯಿಸುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Blr-Police-3

ಬೆಂಗಳೂರು ನಗರದ ಸಂಚಾರಿ ವಿಭಾಗದಲ್ಲಿ ಹೆಚ್ಚುವರಿ ಆಯುಕ್ತರಾಗಿ ಕೆಲಸ ಮಾಡಿದ ತಮಗೆ ಸಂಚಾರ ಸಮಸ್ಯೆ ತಿಳಿದಿದೆ, ಅದನ್ನು ನಿಭಾಯಿಸಿದ್ದೇನೆ. ದಂಡ ವಸೂಲಿ ನಮ್ಮ ಆದ್ಯತೆ ಅಲ್ಲ, ಸುಗಮ ಸಂಚಾರ ನಮ್ಮ ಪ್ರಾಮುಖ್ಯತೆ. ಪ್ರತಿಯೊಬ್ಬರೂ ಶಿಸ್ತಿನ ಸಂಚಾರಕ್ಕೆ ಒಗ್ಗಿಕೊಳ್ಳಬೇಕು. ಪೊಲೀಸರು ಇರದೆ ಇದ್ದರೆ ಕೆಂಪು ದೀಪವನ್ನು ದಾಟಿ ಹೋಗುವ ವಾಹನ ಸವಾರರಿದ್ದಾರೆ. ನಿಲುಗಡೆಯ ಗೆರೆ ದಾಟಿ ಮುಂದೆ ಹೋಗುವವರಿದ್ದಾರೆ. ಇದು ಸರಿಯಲ್ಲ. ಸಂಚಾರ ನಿಯಮ ಉಲ್ಲಂಘಿಸುವುದು ಸುರಕ್ಷತೆಯೂ ಅಲ್ಲ. ನಾಗರಿಕರು ಸ್ವಯಂ ಶಿಸ್ತನ್ನು ರೂಢಿಸಿಕೊಳ್ಳಬೇಕು ಎಂದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Blr-Police-2

Facebook Comments

Sri Raghav

Admin