ಭೀಮಾನಾಯ್ಕ್ ಕಾರು ಚಾಲಕ ರಮೇಶ್ ಸಾವಿನಿಂದ ನೊಂದ ತಂದೆ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Bheema-Naik-Ramesh

ಮದ್ದೂರು, ಜ.1- ಕೆಎಎಸ್ ಅಧಿಕಾರಿ ಭೀಮಾನಾಯ್ಕ್ ಅವರ ಕಾರು ಚಾಲಕನಾಗಿದ್ದ ರಮೇಶ್ ಆತ್ಮಹತ್ಯೆಯಿಂದಾಗಿ ನೊಂದಿದ್ದ ಈತನ ತಂದೆ ಇಂದು ಬೆಳಗ್ಗೆ ತಾಲೂಕಿನ ಕಾಡಕೊತ್ತನಹಳ್ಳಿಯಲ್ಲಿ ವಿಧಿವಶರಾಗಿದ್ದಾರೆ.  ಮಗನ ಸಾವಿನ ಕೊರಗಿನಲ್ಲೇ ಚಿಕ್ಕಹೊಂಬಾಳೇಗೌಡ ಸಾವನ್ನಪ್ಪಿದ್ದಾರೆ. ಕೆಎಎಸ್ ಅಧಿಕಾರಿ ಭೀಮಾನಾಯ್ಕ್ ಅವರ ಕಾರು ಚಾಲಕನಾಗಿದ್ದ ರಮೇಶ್ ಕಿರುಕುಳದಿಂದ ಬೇಸತ್ತು 11 ಪುಟಗಳ ಡೆತ್‍ನೋಟ್ ಬರೆದಿಟ್ಟು ಮದ್ದೂರಿನ ಸಮೃದ್ಧಿ ಲಾಡ್ಜ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಈ ಘಟನೆ ನಂತರ ತಂದೆ ಹೊಂಬಾಳೇಗೌಡ ಮನನೊಂದಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin