ವಾಚ್ ಪ್ರಕರಣ ಮುಗಿದುಹೋದ ಅಧ್ಯಾಯ : ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

siddu

ಬೆಂಗಳೂರು, ಡಿ.31-ತಮಗೆ ದುಬಾರಿ ವಾಚ್ ಕೊಡುಗೆ ನೀಡಿದ ಗಿರೀಶ್ ಚಂದ್ರ ವರ್ಮಾ ಅವರೇ ಪ್ರಮಾಣ ಪತ್ರ ಸಲ್ಲಿಸಿದ ಮೇಲೆ ಆ ಪ್ರಕರಣ ಅಲ್ಲಿಗೇ ಮುಕ್ತಾಯವಾದಂತಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಬಿಜೆಪಿಯ ಹಿರಿಯ ನಾಯಕ ಸುರೇಶ್‍ಕುಮಾರ್ ಅವರು ದುಬಾರಿ ವಾಚ್ ಪ್ರಕರಣದಲ್ಲಿ ಅನಗತ್ಯವಾಗಿ ನನ್ನ ಹೆಸರನ್ನು ಪ್ರಸ್ತಾಫಿಸಿದ್ದಾರೆ. ದಾಖಲೆ ರಹಿತವಾಗಿ ರಾಜಕಾರಣಕ್ಕಾಗಿ ಬಾಯಿಗೆ ಬಂದಂತೆ ಮಾತನಾಡು ವುದನ್ನು ಬಿಡಬೇಕು ಎಂದು ಕಿಡಿಕಾರಿದರು. ನನಗೆ ವಾಚ್ ನೀಡಿದ ಗಿರೀಶ್‍ಚಂದ್ರ ವರ್ಮಾ ಅವರೇ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಬಿಡಿಎ ಅಕಾರಿ ನನಗೆ ಆ ವಾಚ್ ಕೊಡುಗೆ ನೀಡಿದ್ದರು ಎಂಬುದು ಆಧಾರರಹಿತ ಆರೋಪ ಎಂದು ಹೇಳಿದರು.

ಬಿಬಿಎಂಪಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಬಗೆ ಹರಿಸಲು ಹಿರಿಯ ನಾಯಕರ ಜೊತೆ ಚರ್ಚೆ ನಡೆಸುವುದಾಗಿ ಹೇಳಿದರು.  ಈ ಹಿಂದೆ ಮೈತ್ರಿಯ ಸಂದರ್ಭದಲ್ಲಿ ಮಾತುಕತೆಗಳು ನಡೆದಾಗ ನಾನು ಇರಲಿಲ್ಲ. ಮಾತುಕತೆ ವೇಳೆ ಯಾವ ಒಪ್ಪಂದ ಮಾಡಿಕೊಂಡಿದ್ದಾರೆ ಗೊತ್ತಿಲ್ಲ. ಇಂದು ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರು ನನ್ನನ್ನು ಭೇಟಿ ವಿಷಯವನ್ನು ತಿಳಿಸಿದ್ದಾರೆ. ನಾನು ಸಚಿವರ ಜೊತೆ ಮಾತನಾಡುತ್ತೇನೆ ಎಂದರು.  ಬಿಜೆಪಿಯವರು ಟಿಪ್ಪು ಸುಲ್ತಾನ್ ವಿಷಯದಲ್ಲಿ ವಿಮುಖ ನೀತಿ ಅನುಸರಿಸುತ್ತಿದ್ದಾರೆ. ಯಡಿಯೂರಪ್ಪ ಅವರು ಕೆಜೆಪಿಯಲ್ಲಿದ್ದಾಗ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪು ಸುಲ್ತಾನ್ ಮೇಲೆ ಪ್ರೀತಿ ಇತ್ತು. ಈಗ ದ್ವೇಷ ಹುಟ್ಟಿದೆ. ರಾಜಕೀಯಕ್ಕಾಗಿ ಚರಿತ್ರೆಯ ಚಾರಿತ್ರ್ಯ ವಧೆ ಮಾಡಬಾರದು. ಬಿಜೆಪಿಯವರು ಎರಡು ತಲೆ ಹಾವುಗಳಿದ್ದಂತೆ. ಎರಡು ನಾಲಿಗೆ ಜನ. ಪ್ರತಿಕ್ಷಣವೂ ಬಣ್ಣ ಬದಲಿಸುವ ಗೋಸುಂಬೆಗಳು ಮುಖ್ಯಮಂತ್ರಿಗಳು ವಾಗ್ದಾಳಿ ನಡೆಸಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin