ವಿಧ್ವಂಸಕ ಖಡಾಂತರ ಕ್ಷಿಪಣಿ ಪರೀಕ್ಷೆಗೆ ಅಂತಿಮ ಹಂತದ ತಯಾರಿ ನಡೆಸುತ್ತಿದೆ ಉತ್ತರ ಕೊರಿಯಾ

ಈ ಸುದ್ದಿಯನ್ನು ಶೇರ್ ಮಾಡಿ

North-koea

ಸಿಯೊಲ್, ಜ.1-ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಎಚ್ಚರಿಕೆಯನ್ನು ಧಿಕ್ಕರಿಸಿರುವ ಉತ್ತರ ಕೊರಿಯಾ ತಾನು ಅಭಿವೃದ್ಧಿಗೊಳಿಸುತ್ತಿರುವ ವಿಧ್ವಂಸಕ ಖಡಾಂತರ ಕ್ಷಿಪಣಿ ಪ್ರಯೋಗ ಅಂತಿಮ ಹಂತದಲ್ಲಿದೆ ಎಂದು ಘೋಷಿಸಿದೆ.   ಖಡಾಂತರ ಸಿಡಿತಲೆ ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆಯ ಅಂತಿಮ ಹಂತದಲ್ಲಿ ನಾವಿದ್ದೇವೆ. ಅತಿ ಶೀಘ್ರದಲ್ಲೇ ಈ ಪ್ರಯೋಗ ನಡೆಯಲಿದೆ ಎಂದು ಉತ್ತರ ಕೊರಿಯಾ ನಾಯಕ ಕಿಮ್ ಜೊಂಗ್-ಉನ್ ಇಂದು ಟೆಲಿವಿಷನ್‍ನಲ್ಲಿ ಪ್ರಸಾರವಾದ ಹೊಸ ವರ್ಷದ 30 ನಿಮಿಷಗಳ ಭಾಷಣದಲ್ಲಿ ಪ್ರಕಟಿಸಿದ್ದಾರೆ. ಈ ಮೂಲಕ ಕಳೆದ ವರ್ಷದಂತೆ ಈ ವರ್ಷವೂ ಗಂಡಾಂತರಕಾರಿ ಕ್ಷಿಪಣಿಗಳ ಪ್ರಯೋಗ ಮುಂದುವರಿಯಲಿದೆ ಎಂಬ ಸ್ಫಷ್ಟ ಮುನ್ಸೂಚನೆ ನೀಡಿದ್ದಾರೆ.

ನಮ್ಮ ಸೇನಾ ಸಾಮಥ್ರ್ಯ ಅತ್ಯಂತ ಬಲಯುತವಾಗಿದೆ. ವಿಶ್ವದ ಯಾವುದೇ ಪ್ರಬಲ ಶಕ್ತಿಶಾಲಿ ವೈರಿಯೂ ನಮ್ಮನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಕಿಮ್ ನೀಡಿರುವ ಹೇಳಿಕೆ ವಿಶೇಷವಾಗಿ ದಕ್ಷಿಣ ಕೊರಿಯಾವನ್ನು ಕೆರಳಿಸಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin