ಸಿರಿಯಾದಲ್ಲಿ ಕದನ ವಿರಾಮ ಜಾರಿಗೆ ವಿಶ್ವಸಂಸ್ಥೆ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

UN-casfire

ಲೆಬನಾನ್/ವಾಷಿಂಗ್ಟನ್, ಜ.1- ಸಿರಿಯಾದಲ್ಲಿ ಜಾರಿಗೊಳಿಸಲಾಗಿರುವ ಕದನವಿರಾಮ ಬೆಂಬಲಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸರ್ವಾನುಮತದ ಅಂಗೀಕಾರ ಕೈಗೊಳ್ಳಲಾಗಿದೆ. ಕಜಕಿಸ್ತಾನದಲ್ಲಿ ಜನವರಿಯಲ್ಲಿ ನಡೆಯುವ ಸಿರಿಯಾ ಆಡಳಿತ ಮತ್ತು ಬಂಡುಕೋರರ ನಡುವಣ ಶಾಂತಿ ಮಾತುಕತೆಯಲ್ಲಿಯೂ ವಿಶ್ವಸಂಸ್ಥೆ ಭಾಗವಹಿಸುವಂತೆ ರಷ್ಯಾ ಮಾಡಿರುವ ಮನವಿಗೆ ವಿಶ್ವಸಂಸ್ಥೆ ಸ್ಪಂದಿಸಿದೆ. ರಷ್ಯಾ ಮಧ್ಯಸ್ಥಿಕೆಯಲ್ಲಿ ಜಾರಿಗೆ ಬಂದಿರುವ ಯುದ್ಧ ವಿರಾಮದ ಎರಡನೆ ದಿನ ಸಣ್ಣಪುಟ್ಟ ಘರ್ಷಣೆ ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ಕಳೆದಿತ್ತು.

ಕಜಕ್‍ಸ್ತಾನದಲ್ಲಿ ನಡೆಯುವ ಶಾಂತಿ ಮಾತುಕತೆಯು ವಿಶ್ವಸಂಸ್ಥೆಯ ಸಂಧಾನ ಯತ್ನಗಳಿಗೆ ಪರ್ಯಾಯವಲ್ಲ. ಅದಕ್ಕೆ ಪೂರಕವಾಗಿ ಸಮಲೋಚನೆ ನಡೆಯುತ್ತದೆ ಎಂದು ರಷ್ಯಾ ಹೇಳಿದೆ. ಈ ಮಾತುಕತೆಯಲ್ಲಿ ಈಜಿಪ್ಟ್, ಸೌದಿ ಅರೇಬಿಯಾ, ಕತಾರ್ ಮತ್ತು ಜೋರ್ಡಾನ್ ದೇಶಗಳು ಸಹ ಪಾಲ್ಗೊಳ್ಳುವಂತೆ ಮಾಸ್ಕೋ ಆಶಯ ವ್ಯಕ್ತಪಡಿಸಿದೆ.  ಕದನವಿರಾಮ ಕರಡು ನಿರ್ಣಯದ ಬಗ್ಗೆ ಶೀಘ್ರದಲ್ಲೇ ಮತದಾನ ನಡೆಯಲಿದೆ ಹಾಗೂ ಈ ಗೊತ್ತುವಳಿ ಸರ್ವಾನುಮತದಿಂದ ಅಂಗೀಕಾರವಾಗಿದೆ ಎಂದು ವಿಶ್ವಸಂಸ್ಥೆಯ ರಷ್ಯಾ ರಾಯಭಾರಿ ವಿಟಿಲ್ ಜುರ್ಕಿನ್ ವಿಶ್ವಾಸ ವ್ಯಕ್ತಪಡಿಸಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin