BSNL ಗ್ರಾಹಕರಿಗೆ ಭರ್ಜರಿ ಆಫರ್ : ರೂ.144 ಕ್ಕೆ ಉಚಿತ ಅನಿಯಮಿತ ಕರೆ, 300 ಎಂಬಿ ಡಾಟಾ..!

ಈ ಸುದ್ದಿಯನ್ನು ಶೇರ್ ಮಾಡಿ

BSNL-Offer
ನವದೆಹಲಿ,ಜ.01 : ರಿಲಯನ್ಸ್ ಜಿಯೋ ಜಿಯೋ ಜೊತೆ ಸ್ಪರ್ಧೆಗಿಳಿದಿರುವ ಇತರೆ ಟೆಲಿಕಾಂ ಸಂಸ್ಥೆಗಳು ಹೊಸ ವರ್ಷದಿಂದ ನಾನಾ ಆಫರ್ ಗಳನ್ನೂ ನೀಡಿ ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿವೆ, ಇದೆ ಪ್ರಯತ್ನದಲ್ಲಿ ಸರ್ಕಾರಿ ಸ್ವಾಮ್ಯದ ಬಿಬಿಎಸ್ಎನ್ಎಲ್ ಕೂಡ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ್ದು, ಕೇವಲ 144 ರೂ.ಗೆ ತಿಂಗಳುಪೂರ್ತಿ ಉಚಿತ ಅನಿಯಮಿತ ಸ್ಥಳೀಯ ಮತ್ತು ಎಸ್.ಟಿ.ಡಿ. ಕರೆ ಮತ್ತು 300 ಎಂ.ಬಿ. ಉಚಿತ 2ಜಿ/ ಜಿ ಡಾಟಾ ನೀಡಿದೆ.

ಈ ಹೊಸ ಪ್ಲಾನ್ ನಲ್ಲಿ ಮೊಬೈಲ್ ಬಳಕೆದಾರರು ಯಾವುದೇ ನೆಟ್ ವರ್ಕ್ ಗೆ 1 ತಿಂಗಳ ಅವಧಿಯಲ್ಲಿ 144 ರೂ.ಗೆ ಕರೆ ಮಾಡಬಹುದಾಗಿದೆ ಎಂದು ಬಿ.ಎಸ್.ಎನ್.ಎಲ್. ವ್ಯವಸ್ಥಾಪಕ ನಿರ್ದೇಶಕ ಅನುಪಮ್ ಶ್ರೀವಾಸ್ತವ್ ಚೆನ್ನೈ ನಲ್ಲಿ ತಿಳಿಸಿದ್ದಾರೆ. ಈ ಆಫರ್ ಇಂದಿನಿಂದ ಮುಂದಿನ 6 ತಿಂಗಳವರೆಗೆ ಲಭ್ಯವಿರುತ್ತದೆ. ಈ ಹೊಸ ಪ್ಲಾನ್ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಗ್ರಾಹಕರಿಬ್ಬರಿಗೂ ಲಭ್ಯವಿದೆ.  ದೇಶಾದ್ಯಂತ 4400 ವೈಫೈ ಹಾಟ್ ಸ್ಪಾಟ್ ಸಂಪರ್ಕ ಕಲ್ಪಿಸಿದ್ದು, 40,000 ವೈಫೈ ಹಾಟ್ ಸ್ಪಾಟ್ ನಿರ್ಮಿಸುವ ಗುರಿಯನ್ನು ಬಿ.ಎಸ್.ಎನ್.ಎಲ್ ಹೊಂದಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin