ತೆಲಂಗಾಣ ಅಥವಾ ಪಾಂಡಿಚೇರಿ ರಾಜ್ಯಪಾಲರಾಗಿ ಡಿ.ಎಚ್.ಶಂಕರಮೂರ್ತಿ ನೇಮಕ ಸಾಧ್ಯತೆ ..?

ಈ ಸುದ್ದಿಯನ್ನು ಶೇರ್ ಮಾಡಿ

D.H.-ShankarMurthy-DHS

ಬೆಂಗಳೂರು,ಜ.2-ವಿಧಾನಪರಿಷ್‍ತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರನ್ನು ತೆಲಂಗಾಣ ಅಥವಾ ಪಾಂಡಿಚೇರಿ ರಾಜ್ಯಪಾಲರನ್ನಾಗಿ ಮಾಡಲು ಬಿಜೆಪಿ ನಿರ್ಧರಿಸಿದ್ದು, ಸದ್ಯದಲ್ಲೇ ನೇಮಕ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯಪಾಲರನ್ನಾಗಿ ನೇಮಿಸುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ಸಿಕ್ಕಿದ್ದು, ಸದ್ಯದಲ್ಲೇ ಪ್ರಕ್ರಿಯೆ ಪೂರ್ಣವಾಗಲಿದೆ. ರಾಜ್ಯಪಾಲರ ನೇಮಕ ವಿಚಾರ ಈಗಾಗಲೇ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಕೇಂದ್ರ ಗೃಹ ಇಲಾಖೆಯಲ್ಲಿ ಕಡತ ವಿಲೇವಾರಿಯಾಗಿದ್ದು, ಅಂತಿಮ ಆದೇಶ ಮಾತ್ರ ಬಾಕಿ ಇದೆ.
ಗೃಹ ಸಚಿವ ರಾಜನಾಥ್‍ಸಿಂಗ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಸಲಹೆಗೆ ಕಾಯುತ್ತಿದ್ದು, ನಂತರದಲ್ಲಿ ನೇಮಕ ಆದೇಶ ಹೊರ ಬೀಳಲಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ರಾಜ್ಯಪಾಲರ ನೇಮಕ ವಿಚಾರದಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಪ್ರಸ್ತಾಪವೂ ಆಯಿತು. ತಡವಾಗಿರುವ ಬಗ್ಗೆ ರಾಜನಾಥï ಸಿಂಗï ಬೇಸರ ವ್ಯಕ್ತಪಡಿಸಿದರು. ಅಲ್ಲದೆ ಸದ್ಯದಲ್ಲೇ ನೇಮಕ ಮಾಡುವ ಭರವಸೆ ನೀಡಿ ದ್ದಾರೆ ಎಂದರು. ನನ್ನನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡುವ ವಿಚಾರವಾಗಿ ಸಾಕಷ್ಟುಬಾರಿ ಸುದ್ದಿಗಳು ಹರಡಿದಾಗ ನನಗೆ ಆಸಕ್ತಿ ಹೆಚ್ಚಾಗುತ್ತಿತ್ತು.
ಆದರೆ ರಾಜನಾಥ ಸಿಂಗ್‍ಅವರನ್ನು ಭೇಟಿ ಮಾಡಿದ ನಂತರ ಸ್ಪಷ್ಟವಾಯಿತು. ಸದ್ಯದಲ್ಲೇ ರಾಜ್ಯಪಾಲರಾಗಿ ನನ್ನನ್ನು ನೇಮಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಶಂಕರಮೂರ್ತಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin