ಹಣಕ್ಕಾಗಿ ಎಟಿಎಂ ಮುಂದೆ ಘರ್ಷಣೆ : ಗುಂಡಿನ ದಾಳಿಯಲ್ಲಿ ಐವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ATM-Firing

ಮುಜಫರ್‍ನಗರ್, ಜ.2- ಎಟಿಎಂ ಸರದಿ ಸಾಲಿಗಾಗಿ ಎರಡು ಗುಂಪುಗಳ ನಡುವೆ ಭುಗಿಲೆದ್ದ ಘರ್ಷಣೆಯಲ್ಲಿ ಗುಂಡಿನ ದಾಳಿಯಲ್ಲಿ ಐವರು ಗಾಯಗೊಂಡ ಘಟನೆ ಉತ್ತರಪ್ರದೇಶದ ಮುಜಫರ್‍ನಗರ್ ಜಿಲ್ಲೆಯ ಭೋಪಾ ಪೊಲೀಸ್ ಠಾಣೆ ವ್ಯಾಪ್ತಿಯ ಬೋಕಾಹರಿ ಗ್ರಾಮದಲ್ಲಿ ನಡೆದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಎಂಟಿಎಂ ಮುಂದೆ ಸೇರಿದ್ದ ಸಾಲಿನಲ್ಲಿ ಇಬ್ಬರು ವ್ಯಕ್ತಿಗಳು ಮಧ್ಯೆ ಬಂದು ನಿಂತಾಗ ಇನ್ನೊಂದು ಗುಂಪು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಘರ್ಷಣೆ ನಡೆಯಿತು.   ಸ್ಪಲ್ವ ಸಮಯದ ನಂತರ ಎರಡು ಗುಂಪುಗಳು ಪಿಸ್ತೂಲ್ ಮತ್ತು ಮಾರಾಕಾಸ್ತ್ರಗಳನ್ನು ಬಳಸಿ ಹೊಡೆದಾಟಕ್ಕೆ ಇಳಿದಾಗ ಐವರು ಗಾಯಗೊಂಡರು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಈ ಸಂಬಂಧ ಎರಡೂ ಗುಂಪಿನ ಕೆಲವರನ್ನು ಬಂಧಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನೆಲೆಗೊಂಡಿದ್ದು, ಅಹಿತಕರ ಘಟನೆಗಳು ಮರುಕಳಿಸದಂತೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin