ಹೆಂಡತಿ ಮಕ್ಕಳಿಗೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿ ಸುಟ್ಟ ಕಿರಾತಕ ಪತಿ

ಈ ಸುದ್ದಿಯನ್ನು ಶೇರ್ ಮಾಡಿ

Raichur
ರಾಯಚೂರು,ಜ.2– ಕಿರಾತಕ ಪತಿಯೊಬ್ಬ ತನ್ನ ಹೆಂಡತಿ ಮತ್ತು ಇಬ್ಬರು ಮುದ್ದು ಮಕ್ಕಳಿಗೆ ಸೀಮೆಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿರುವ ದಾರುಣ ಘಟನೆ ರಾಯಚೂರು ಸಮೀಪದ ಎರಗೇರ ಗ್ರಾಮದಲ್ಲಿ ನಡೆದಿದೆ.   ಪತ್ನಿ ಮಾಧುರಿ(28), ಪುಟ್ಟ ಮಕ್ಕಳಾದ ಮಾನಸ(15), ಹಾಗೂ ಮಾತೃ(10) ಎಂಬುವವರಿಗೆ ಈ ನೀಚ ಪತಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ.
ಪತಿ ಪತ್ನಿಯರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇಂದು ಆ ಜಗಳ ವಿಕೋಪಕ್ಕೆ ಹೋದಾಗ ಪತಿ ರಾಘವೇಂದ್ರ ಕೋಪದಿಂದ ಪತ್ನಿ ಹಾಗೂ ತನ್ನ ಎರಡೂ ಮಕ್ಕಳ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ.

Raichur-1

ಸುದ್ದಿ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪಾತಾಕಿ ರಾಘವೇಂದ್ರನನ್ನು ಬಂಧಿಸಿ ತೀವ್ರ ತನಿಖೆಗೊಳಪಡಿಸಿದ್ದಾರೆ. ರಾಘವೇಂದ್ರನ ಪತ್ನಿ ಮಾಧುರಿ ಅವರು ತೆಲಂಗಾಣ ಶಾಸಕಿ ಅರುಣ ಅವರ ಸಂಬಂಧಿ ಎಂದು ಪೊಲೀಸರು ತಿಳಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Raichur-4

Raichur-3

Facebook Comments

Sri Raghav

Admin