ಕಳ್ಳಭಟ್ಟಿ ಗೆ 6 ಮಂದಿ ಬಲಿ, 30ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

6-Killed-1

ಬುದ್ರ್ವಾನ್, ಜ.3- ಕಳ್ಳಭಟ್ಟಿ ಸೇವಿಸಿ ಆರು ಮಂದಿ ಮೃತಪಟ್ಟು, 30ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥರಾಗಿರುವ ಘಟನೆ ಪಶ್ಚಿಮಬಂಗಾಳದ ಬುದ್ರ್ವಾನ್‍ನ ಗಾಸ್ಲಿಯ್ ರಾಮಗೋಪಾಲಪಿರ ಗ್ರಾಮದಲ್ಲಿ ನಡೆದಿದೆ. ಕಳ್ಳಭಟ್ಟಿ ಸೇವಿಸಿದ ಸುಮಾರು 40 ಜನರಲ್ಲಿ ನಿನ್ನೆ ರಾತ್ರಿ ಆರು ಮಂದಿ ಮೃತಪಟ್ಟರು. ಬುದ್ರ್ವಾನ್ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಪುರ್ಷಾ ಹಾಸ್ಪಿಟಲ್‍ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 30ಕ್ಕೂ ಹೆಚ್ಚು ಮಂದಿಯಲ್ಲಿ 18 ಮಂದಿ ಸ್ಥಿತಿ ಶೋಚನೀಯವಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕವಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin