ಸ್ಲಂ ಬೋರ್ಡ್‍ನಿಂದ ಪೌರಕಾರ್ಮಿಕರಿಗೆ ವಸತಿ ಭಾಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

mayor

ಬೆಂಗಳೂರು, ಜ.2- ಪೌರ ಕಾರ್ಮಿಕರಿಗೆ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಮಂಡಳಿಯ ಅಧ್ಯಕ್ಷ ಆರ್.ವಿ. ದೇವರಾಜ್ ಇಂದಿಲ್ಲಿ ತಿಳಿಸಿದರು. ದಕ್ಷಿಣ ವಲಯ ಪೌರಕಾರ್ಮಿಕರ ಬಿಸಿಯೂಟ ಯೋಜನೆ ಜಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಸಿಲು-ಮಳೆ ಎನ್ನದೆ ನಗರದ ಸ್ವಚ್ಛತೆಗಾಗಿ ದುಡಿ ಯುತ್ತಿರುವ ಪೌರಕಾರ್ಮಿಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ಈಗಾಗಲೇ ಹಲವು ಯೋಜನೆಗಳು ನೀಡಿದೆ ಹಾಗೂ ಪೌರಕಾರ್ಮಿಕರಿಗೆ ವಸತಿ ಕಲ್ಪಿಸಬೇಕೆಂಬುದು ಕಾಂಗ್ರೆಸ್ ಸರ್ಕಾರದ ಉದ್ದೇಶ ಎಂದರು.

ಮೇಯರ್ ಜಿ.ಪದ್ಮಾವತಿ ಮಾತ ನಾಡಿ, ಇದುವರೆಗೂ ಪೌರ ಕಾರ್ಮಿಕರ ವೇತನ ಹೆಚ್ಚಳ ಮಾಡಿರಲಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ನಗರದ ಎಲ್ಲಾ ಪೌರಕಾರ್ಮಿಕರಿಗೆ 15 ಸಾವಿರ ರೂ. ವೇತನ ಹೆಚ್ಚಳ ಮಾಡಿದೆ. ಜೊತೆಗೆ ನಾಲ್ಕೂವರೆ ಸಾವಿರ ಪೌರಕಾರ್ಮಿಕರ ಹುದ್ದೆಯನ್ನು ಖಾಯಂಗೊಳಿಸಲು ಸರ್ಕಾರ ತೀರ್ಮಾನಿಸಿದೆ ಎಂದರು.  ನಗರವನ್ನು ಸ್ವಚ್ಛವಾಗಿಡುವಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ತರ ವಾದುದು. ಅವರು ಬೆಳಗ್ಗೆ, ಮಧ್ಯಾಹ್ನ ಎನ್ನದೆ ಸ್ವಚ್ಛತೆ ಕಾಪಾಡುವಲ್ಲಿ ಸದಾ ತಲ್ಲೀನರಾಗಿರುತ್ತಾರೆ. ದಿನನಿತ್ಯ ದುಡಿಯುವ ಇವರಿಗೆ ಬಿಸಿಯೂಟ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶ ಎಂದರು.  ಮೂರು ವಲಯಗಳಲ್ಲಿ ಈಗಾ ಗಲೇ ಬಿಸಿಯೂಟ ಯೋಜನೆ ಆರಂಭ ವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲಾ ಎಂಟು ವಲಯಗಳಲ್ಲಿ ಬಿಸಿಯೂಟ ಯೋಜನೆ ಜಾರಿಯಾಗಲಿದೆ ಎಂದರು. ದಕ್ಷಿಣ ವಲಯದ ವಿವಿಧ ವಾರ್ಡ್‍ಗಳ ಬಿಬಿಎಂಪಿ ಸದಸ್ಯರು ಹಾಗೂ ಪಾಲಿಕೆ ಅಕಾರಿಗಳು ಉಪಸ್ಥಿತರಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin