ಹೈನುಗಾರಿಗೆ ಉತ್ತೇಜನಕ್ಕಾಗಿ ಅಕ ಹಾಲು ಕರೆಯುವ ಸ್ಪರ್ಧೆ

ಈ ಸುದ್ದಿಯನ್ನು ಶೇರ್ ಮಾಡಿ

mahadevapura

ಮಹದೇವಪುರ, ಜ.2- ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಕ ಹಾಲು ಕರೆಯುವ ಸ್ಪರ್ಧೆಯನ್ನು ಶ್ರೀ ಆದಿ ಶಕ್ತಿ ದ್ರೌಪದಮ್ಮ ಗೋಪಾಲಕರ ಸಂಘದ ವತಿಯಿಂದ ಆಯೋಜಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸಂತೋಷ್ ಕುಮಾರ್ ತಿಳಿಸಿದರು.
ಕ್ಷೇತ್ರದ ವರ್ತೂರಿನ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಅಕ ಹಾಲು ಕರೆಯುವ ಸ್ಪರ್ಧೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ರೈತರು ಕಂಡ ಬರದಿಂದ ಫಸಲು ಮತ್ತು ಹಾಕಿರುವ ಬಂಡವಾಳವೂ ಇಲ್ಲದೆ ಕಂಗೆಟ್ಟಿದ್ದು, ಕೃಷಿ ಚಟುವಟಿಕೆಯಿಂದ ಜೀವನ ನಡೆಸುವುದು ಕಷ್ಟಮಯವಾಗಿದೆ, ಜೂಜು ಆಟದಂತಾಗಿರುವ ವ್ಯವಸಾಯದಲ್ಲಿ ತೊಡಗಲು ನಿರುತ್ಸಾಹಿಗಳಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.  ದೇಶದ ಬೆನ್ನೆಲುಬಾಗಿರುವ ರೈತರ ಸಾಲ ಮನ್ನ ಮಾಡುವಲ್ಲಿ ಸರ್ಕಾರವೂ ಸಹ ವಿಫಲವಾಗಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೈನುಗಾರಿಕೆಯನ್ನು ಅವಲಂಭಿಸಿರುವ ರೈತರಿಗೆ ಹಾಲಿಗೆ ಸಮರ್ಪಕ ಬೆಂಬಲಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದ ಅವರು, ಸ್ಪರ್ಧೆಯಲ್ಲಿ ವಿಜೇತರಿಗೆ ಹಣದ ಸಹಾಯ ನೀಡಿ ಹೈನುಗಾರಿಕೆಗೆ ಪೆÇ್ರೀತ್ಸಾಹ ನೀಡಲಾಗುತ್ತಿದೆ ಎಂದರು.  ಆನೇಕಲ್, ಚಿಂತಾಮಣಿ, ಕೋಲಾರ, ಮೈಸೂರು, ಹೊಸಕೋಟೆ ಮತ್ತು ಬೆಂಗಳೂರಿನ ಕಾಕ್ಸ್‍ಟೌನ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೂರಾರು ರಾಸುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.  ಶ್ರೀ ಆದಿ ಶಕ್ತಿ ದ್ರೌಪದಮ್ಮ ಗೋಪಾಲಕರ ಸಂಘದ ಉಪಾಧ್ಯಕ್ಷ ಹಲಸಹಳ್ಳಿ ಸೀನಪ್ಪ, ಕಾರ್ಯ ದರ್ಶಿಗಳಾದ ಸುನೀಲ್, ಬಾಬು ಮತ್ತಿತರರು ಉಪಸ್ಥಿತರಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin