ಪುದುಚೇರಿಯ ಮಾಜಿ ಕೃಷಿ ಸಚಿವನ ಕಗ್ಗೊಲೆ

ಈ ಸುದ್ದಿಯನ್ನು ಶೇರ್ ಮಾಡಿ

MIn-ister-Kiled

ಕಾರೈಕಲ್, ಜ.4-ಪುದುಚೇರಿಯ ಮಾಜಿ ಕೃಷಿ ಸಚಿವ ಮತ್ತು ಮಾಜಿ ವಿಧಾನಸಭಾಧ್ಯಕ್ಷ ವಿ.ಎಂ.ಸಿ. ಶಿವಕುಮಾರ್ ಅವರನ್ನು ದುಷ್ಕರ್ಮಿಗಳು ಭೀಕರವಾಗಿ ಕೊಚ್ಚಿ ಕೊಲೆಗೈದು ಪರಾರಿಯಾಗಿರುವ ಘಟನೆ ಕಾರೈಕಲ್‍ನಲ್ಲಿ ನಡೆದಿದೆ.   ನಿರ್ಮಾಣ ಕಾಮಗಾರಿ ವೀಕ್ಷಿಸಲು ತೆರಳುತ್ತಿದ್ದ ಶಿವಕುಮಾರ್ ಕಾರನ್ನು ತಮಿಳುನಾಡಿನ ನಾಗಪಟ್ಟಿಣಂ ಜಿಲ್ಲೆಯ ನೆರವಿ-ಟಿ.ಆರ್.ಪಟ್ಟಿಣಂ ಬಳಿ ನಿನ್ನೆ ಸಂಜೆ ಅಡ್ಡಗಟ್ಟಿದ ದುಷ್ಕರ್ಮಿಗಳು ಮಚ್ಚಿನಿಂದ ಅವರ ಮೇಲೆ ದಾಳಿ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ತೀವ್ರ ಗಾಯಗೊಂಡಿದ್ದ ಅವರು ಆಸ್ಪತ್ರೆ ಸೇರುವ ಮಾರ್ಗದಲ್ಲಿ ಕೊನೆಯುಸಿರೆಳೆದರು. ನೆರವಿ-ಟಿ.ಆರ್.ಪಟ್ಟಣಂ ವಿಧಾನಸಭಾ ಕ್ಷೇತ್ರದಿಂದ ಅವರು ನಾಲ್ಕು ಬಾರಿ ಡಿಎಂಕೆ ಪಕ್ಷದಿಂದ ಮತ್ತು ಒಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾಯಿತರಾಗಿದ್ದರು. 1996 ರಿಂದ 2000ವರೆಗೆ ಪುದುಚೇರಿಯ ವಿಧಾನಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಅವರು ಎಐಎಡಿಎಂಕೆ ಜೊತೆ ಗುರುತಿಸಿಕೊಂಡಿದ್ದರು. ಹಳೆ ವೈಷಮ್ಯವೇ ಈ ಕಗ್ಗೊಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಹಂತಕರ ಸೆರೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin