ಸುಪ್ರೀಂ ಕೋರ್ಟ್’ನ 44ನೇ ಮುಖ್ಯ ನ್ಯಾಯಮೂರ್ತಿಯಾಗಿ ಖೇಹರ್ ಪ್ರಮಾಣ ವಚನ

ಈ ಸುದ್ದಿಯನ್ನು ಶೇರ್ ಮಾಡಿ

Jagadish-Singh-Kehar

 

ನವದೆಹಲಿ, ಜ.4-ಸುಪ್ರೀಂ ಕೋರ್ಟ್’ನ  44ನೇ ಮುಖ್ಯ ನ್ಯಾಯಮೂರ್ತಿಯಾಗಿ ಜಗದೀಶ್ ಸಿಂಗ್ ಖೇಹರ್ ಇಂದು ಪ್ರಮಾಣ ವಚನ ಸ್ವೀಕರಿಸಿದ್ಧಾರೆ. ರಾಷ್ಟ್ರಪತಿ ಭವನದ ದರ್ಭಾರ್ ಹಾಲ್‍ನಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ನೂತನ ಮುಖ್ಯ ನ್ಯಾಯಾಧೀಶರಿಗೆ ಅಧಿಕಾರ ಮತ್ತು ಗೋಪ್ಯ ಪ್ರತಿಜ್ಞಾ ವಿಧಿ ಬೋಧಿಸಿದರು. ಮುಖ್ಯ ನ್ಯಾಯಮೂರ್ತಿ ಖೇಹರ್ ದೇವರ ಹೆಸರಿನಲ್ಲಿ ಇಂಗ್ಲಿಷ್‍ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.   ಸುಪ್ರೀಂಕೋಟ್ ಸಿಜೆಯಾಗಿದ್ದ ಟಿ.ಎಸ್.ಠಾಕೂರ್ ಮಂಗಳವಾ ನಿವೃತ್ತರಾಗಿದ್ದರು. ಸರ್ವೋಚ್ಚ ನ್ಯಾಯಾಲಯದ ಅತ್ಯಂತ ಹಿರಿಯ ನ್ಯಾಯಾಧೀಶರಾದ ಖೇಹರ್ ಹೆಸರನ್ನು ಈ ಹುದ್ದೆಗೆ ಠಾಕೂರ್ ಕಳೆದ ತಿಂಗಳು ಶಿಫಾರಸು ಮಾಡಿದ್ದರು. 64 ವರ್ಷ ಜಗದೀಶ್ ಸಿಂಗ್ ಠಾಕೂರ್ ಸಿಖ್ ಸಮುದಾಯದ ಪ್ರಥಮ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin