ಸೂಟ್ ಕೇಸ್ ನಲ್ಲಿ ಅಡಗಿ ಕೂತು ಗಡಿದಾಟಲೆತ್ನಿಸಿದ್ದ ಭೂಪ..!

ಈ ಸುದ್ದಿಯನ್ನು ಶೇರ್ ಮಾಡಿ

Suitrcase

ಸ್ಯೂಟಿ (ಉತ್ತರ ಆಫ್ರಿಕಾ), ಜ.4- ಅಕ್ರಮ ವಲಸಿಗ ತರುಣನೊಬ್ಬನನ್ನು ಸೂಟ್‍ಕೇಸ್ ಒಳಗೆ ಅಡಗಿಸಿ ಸ್ಪೇನ್ ದೇಶದೊಳಗೆ ಸಾಗಿಸಲು ಯತ್ನಿಸಿದ ಮಹಿಳೆಯೊಬ್ಬಳು ಈಗ ಪೊಲೀಸರ ಅತಿಥಿಯಾಗಿದ್ದಾಳೆ.  ಮೊರೊಕ್ಕೋ ಗಡಿ ದಾಟಿ ಉತ್ತರ ಆಫ್ರಿಕಾದಲ್ಲಿನ ಸ್ಪೇನ್ ನಿಯಂತ್ರಣದಲ್ಲಿರುವ ಸ್ಯೂಟಿ ಎಂಬ ಪ್ರದೇಶಕ್ಕೆ ತೆರಳಲು 22 ವರ್ಷದ ಈ ಮಹಿಳೆ ಬಯಸಿದ್ದಳು. ಗಡಿ ಪ್ರದೇಶವನ್ನು ದಾಟುವಾಗ ಆಕೆಯ ಬಳಿ ಇದ್ದ ಭಾರೀ ಗಾತ್ರದ ಸೂಟ್‍ಕೇಸ್ ಮೇಲೆ ಸಿಬ್ಬಂದಿಗೆ ಅನುಮಾನ ಬಂತು. ಈಕೆ ಟ್ರಕ್ ಮೂಲಕ ಸೂಟ್‍ಕೇಸ್‍ನನ್ನು ತಂದಿದ್ದಳು.
ತಪಾಸಣಾ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಈಕೆ ಸರಿಯಾದ ಉತ್ತರ ನೀಡಲಿಲ್ಲ. ಅನುಮಾನದಿಂದ ಸೂಟ್‍ಕೇಸ್ ತೆರೆದು ನೋಡಿದಾಗ ಒಳಗೆ 19 ವರ್ಷದ ತರುಣ ಇದ್ದ. ಆತ ಗಾಬನ್ ಪ್ರಾಂತ್ಯದಿಂದ ಅಕ್ರಮವಾಗಿ ವಲಸೆ ಬಂದಿದ್ದ. ಆಮ್ಲಜನಕದ ಕೊರತೆಯಿಂದ ಉಸಿರುಗಟ್ಟಿದಂತಾಗಿ ಆತ ನಿತ್ರಾಣಗೊಂಡಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin