ಮತ್ತೊಂದು ಸರ್ಜಿಕಲ್ ಸ್ಟ್ರೈಕ್’ನ ಸೂಕ್ಷ್ಮ ಸುಳಿವು ನೀಡಿದ ರಾವತ್..!

ಈ ಸುದ್ದಿಯನ್ನು ಶೇರ್ ಮಾಡಿ

Bipin
ಜಮ್ಮು,ಜ.5- ಉಗ್ರರನ್ನು ಸದೆಬಡೆಯಲು ಎರಡನೇ ಸರ್ಜಿಕಲ್ ದಾಳಿ ನಡೆಸುವ ಬಗ್ಗೆ ಸೂಕ್ಷ್ಮ ಸುಳಿವು ನೀಡಿರುವ ಭಾರತೀಯ ಭೂಸೇನೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಇಂದು ಜಮ್ಮುಕಾಶ್ಮೀರಕ್ಕೆ ಭೇಟಿ ನೀಡಿ ಗಡಿಭಾಗದಲ್ಲಿನ ಸೇನಾ ಸಿದ್ಧತೆ ಬಗ್ಗೆ ಅವಲೋಕಿಸಿದರು.  ಸೇನೆಯ 27ನೇ ಮುಖ್ಯರಸ್ಥರಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಕಾಶ್ಮೀರ ಕಣಿವೆಗೆ ಭೇಟಿ ನೀಡಿದ ರಾವತ್, ವಿವಿಧ ಸೇನಾ ನೆಲೆಗಳಿಗೆ ತೆರಳಿ ಉನ್ನತಾಕಾರಿಗಳೊಂದಿಗೆ ಮಹತ್ವದ ಮಾತುಕತೆ ನಡೆಸಿದರು.

ಗಡಿಯಲ್ಲಿ ಶಾಂತಿ ಕಾಪಾಡಲು ಭಾರತ ಸೇನೆ ಬದ್ದವಾಗಿದೆ. ವಿನಾಕಾರಣ ನಮ್ಮ ತಂಟೆಗೆ ಬಂದರೆ ಬಲಪ್ರಯೋಗ ಮಾಡಲು ಹಿಂಜರಿಯುವುದಿಲ್ಲ ಎಂದು ಇತ್ತೀಚೆಗಷ್ಟೇ ರಾವತ್ ಹೇಳಿಕೆ ನೀಡಿದ್ದರು.  ಈ ಹಿನ್ನೆಲೆಯಲ್ಲಿ ಅವರ ಕಾಶ್ಮೀರ ಭೇಟಿ ಭಾರೀ ಮಹತ್ವ ಪಡೆದುಕೊಂಡಿದೆ.  ಭಯೋತ್ಪಾದಕರ ನಿಗ್ರಹಕ್ಕೆ ಎರಡನೇ ಸರ್ಜಿಕಲ್ ದಾಳಿ ನಡೆಸುವ ಬಗ್ಗೆ ಅವರು ಕಳೆದ ಎರಡು ದಿನಗಳ ಹಿಂದಷ್ಟೇ ಸೂಕ್ಷ್ಮ ಸುಳಿವು ನೀಡಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin