2 ತಿಂಗಳೊಳಗೆ ಬೆಂಗಳೂರಲ್ಲಿ 550 ಸಿಸಿಟಿವಿ ಅಳವಡಿಕೆ : ಗೃಹ ಸಚಿವ ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

Parameshwar

ಬೆಂಗಳೂರು, ಜ.5– ನಗರದಲ್ಲಿ ಹೊಸದಾಗಿ 5 ಸಾವಿರ ಸಿಸಿಟಿವಿಗಳನ್ನು ಅಳವಡಿಸಲು ನಿರ್ಧರಿಸಿದ್ದು, ಇನ್ನೆರಡು ತಿಂಗಳಲ್ಲಿ 550 ಹೊಸ ಸಿಸಿಟಿವಿ ಅಳವಡಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 550 ಸಿಸಿಟಿವಿ ಅಳವಡಿಸಲು 39 ಕೋಟಿ ರೂ. ವೆಚ್ಚವಾಗಲಿದೆ. ಸೂಕ್ಷ್ಮ ಪ್ರದೇಶ ಸೇರಿದಂತೆ ಅವಶ್ಯಕತೆಯಿರುವ ಕಡೆ ಸಿಸಿಟಿವಿ ಅಳವಡಿಸಲಿದ್ದಾರೆ. ಮುಂದಿನ ದಿನಗಳಲ್ಲಿ 5 ಸಾವಿರ ಸಿಸಿಟಿವಿ ಅಳವಡಿಸಲು ಉದ್ದೇಶಿಸಲಾಗಿದೆ. ಪೊಲೀಸ್ ಕಚೇರಿ ನಿಯಂತ್ರಣ ಕೊಠಡಿ 100 ಸಂಖ್ಯೆಗೆ ಈಗ 15 ಮಾರ್ಗವಿದ್ದು, ಅವುಗಳನ್ನು ನೂರು ಲೈನ್‍ಗಳಿಗೆ ಹೆಚ್ಚಳ ಮಾಡಲಾಗುವುದು. ಇದಕ್ಕಾಗಿ 14 ಕೋಟಿ ರೂ. ವೆಚ್ಚ ಮಾಡಲಾಗುವುದು. ದಿನದ 24 ಗಂಟೆ ವಾರದ ಏಳು ದಿನವೂ ಕಾರ್ಯನಿರ್ವಹಿಸಲಿವೆ.

ಶೇ.5ರಷ್ಟಿರುವ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಶೇ.20ಕ್ಕೆ ಹೆಚ್ಚಿಸಲಾಗುವುದು. ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಹೊಸದಾಗಿ ನೇಮಕ ಮಾಡಲಾಗುವುದು. ಹೊಸ ವರ್ಷಾಚರಣೆಯ ಘಟನೆಗಳನ್ನು ರಾಜಕೀಯ ಲಾಭ ಮಾಡಿಕೊಳ್ಳುವ ಸಂಚಿನ ಯತ್ನ ನಡೆಯುತ್ತಿದೆಯೇ… ಎಂಬ ಬಗ್ಗೆ ಇನ್ನೆರಡು ದಿನಗಳಲ್ಲಿ ಪ್ರತಿಕ್ರಿಯಿಸಲಾಗುವುದು ಎಂದರು. ಹೊಸ ವರ್ಷಾಚರಣೆ ಸಂಭ್ರಮ ಮೂಡಿಸಬೇಕಿತ್ತು. ಆದರೆ ಕಪ್ಪು ಛಾಯೆ ಮೂಡಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin