ಬೆಂಗಳೂರಲ್ಲಿ ಮತ್ತೊಂದು ಕಾಮಚೇಷ್ಟೆ : ಯುವತಿಯ ತುಟಿ, ನಾಲಿಗೆ ಕಚ್ಚಿ ಕಾಮುಕ ಪರಾರಿ

ಈ ಸುದ್ದಿಯನ್ನು ಶೇರ್ ಮಾಡಿ

Kammanahalli-Kamuka-Bengalu

ಬೆಂಗಳೂರು. ಜ. 06 : ಇನ್ನೂ ಕಮ್ಮನಹಳ್ಳಿಯಲ್ಲಿ ನಡೆದ ಯುವತಿಯ ಮೇಲಿನ ಲೈಂಗಿಕ ದೌರ್ಜನ್ಯ ಘಟನೆ ಮಾಸುವ ಮುನ್ನವೇ ಇಂದು ಬೆಳಿಗ್ಗೆ ಕೆ.ಜಿ. ಹಳ್ಳಿಯಲ್ಲಿ ಯುವತಿಯೊಬ್ಬಳನ್ನು ಅಡ್ಡಗಟ್ಟಿದ ಪುಂಡನೊಬ್ಬ ಆಕೆಯನ್ನು ತಬ್ಬಿಕೊಂಡು, ಚುಂಬಿಸಿ ಗಾಯಗೊಳಿಸಿರುವ ಘಟನೆ ನಡೆದಿದೆ.   ಕೆ ಜಿ ಹಳ್ಳಿಯಲ್ಲಿ ಇಂದು ಬೆಳಿಗ್ಗೆ 6 ,30 ರಲ್ಲಿ ಈ ಘಟನೆ ನಡೆದಿದ್ದು. ಯುವತಿಯನ್ನ ತಬ್ಬಿ ಕೊಳ್ಳುವ ಜೊತೆಗೆ ಅಸಭ್ಯ ವರ್ತನೆ ತೋರಿದ್ದಾನೆ. ಈ ವೇಳೆ ಯುವತಿ ಕೂಗಿಕೊಂಡಿದ್ದು, ಪ್ರತಿರೋಧ ಒಡ್ಡಿದ್ದಾಳೆ. ಆದರೆ ಕಾಮುಕ ಆಕೆಯ ತುಟಿ ಮತ್ತು ನಾಲಿಗೆಯನ್ನು ಕಚ್ಚಿ ವಿಕೃತವಾಗಿ ವರ್ತಿಸಿ ಜನ ಸೇರುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕೆ ಜಿ ಹಳ್ಳಿ ಪೊಲೀಸರು ತನಿಖೆ ಆರಂಭಿಸಿದ್ದು, ಕಾಮಣ್ಣನ ಭೇಟಿಗೆ ಜಾಲ ಬೀಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin