ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕವಿಕಾದಿಂದ 1 ಕೋಟಿ ದೇಣಿಗೆ
ಬೆಂಗಳೂರು, ಜ.7- ಕರ್ನಾಟಕ ವಿದ್ಯುತ್ ಕಾರ್ಖಾನೆ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂ.ಗಳ ಚೆಕ್ ನೀಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕವಿಕಾ ಅಧ್ಯಕ್ಷ ಎಸ್.ಮನೋಹರ್, ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ, ಪ್ರವಾಸೋದ್ಯಮ ಮಾಹಿತಿ-ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ, ಇಂಧನ ಇಲಾಖೆ ಮುಖ್ಯ ಕಾರ್ಯದರ್ಶಿ ಇ.ರವಿಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಬಿ.ವಿ.ಪ್ರಸಾದ್, ಕವಿಕಾ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಡಬ್ಲ್ಯೂ.ಎಂ.ಶಿವಕುಮಾರ್, ಕಾರ್ಯ ನಿರ್ವಾಹಕ ನಿರ್ದೇಶಕ ಎನ್.ಕೆ.ರಾಮಚಂದ್ರನ್, ಮುಖಂಡರಾದ ಜಿ.ಜನಾರ್ದನ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿದ್ಯುತ್ ಕಾರ್ಖಾನೆಯನ್ನು ಬಲಪಡಿಸಲು ಅವಶ್ಯವಿರುವ ಬೇಡಿಕೆಗಳ ಮನವಿಯನ್ನು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಅಧ್ಯಕ್ಷರಾದ ಮನೋಹರ್ ಸಲ್ಲಿಸಿದರು.
ಕಾರ್ಖಾನೆಯು ಏಕೈಕ ಸರ್ಕಾರಿ ಸ್ವಾಮ್ಯದ ಬಿಐಎಸ್ ನೋಂದಣಿ ಹೊಂದಿರುವ ಪರಿವರ್ತಕಗಳ ಉತ್ಪಾದನಾ ಘಟಕವಾಗಿದ್ದು, ಹಾಲಿ 25 ಸಾವಿರ ವಾರ್ಷಿಕ ಉತ್ಪಾದನಾ ಸಾಮಥ್ರ್ಯ ಹೊಂದಿದ್ದು, ಮುಂದಿನ ವರ್ಷದಲ್ಲಿ 50 ಸಾವಿರ ಪರಿವರ್ತಕಗಳ ಉತ್ಪಾದನಾ ಗುರಿ ಹೊಂದಿದ್ದು, ರೈತರಿಗೆ ಹಾಗೂ ಇತರೆ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಪರಿವರ್ತಕಗಳನ್ನು ಸರಬರಾಜು ಮಾಡುವ ಹಿತದೃಷ್ಟಿಯಿಂದ ಎಲ್ಲ ಎಸ್ಕಾಂಗಳು ತಮಗೆ ಅವಶ್ಯವಿರುವ ಪರಿವರ್ತಕಗಳನ್ನು ಕವಿಕಾ ಕಾರ್ಖಾನೆಯಿಂದಲೇ ಪೂರೈಸಿಕೊಳ್ಳಲು ಎಸ್ಕಾಂಗಳಿಗೆ ಕಟ್ಟುನಿಟ್ಟಾದ ಆದೇಶ ನೀಡಬೇಕಾಗಿ ಮನವಿ ಮಾಡಿದರು.
Eesanje News 24/7 ನ್ಯೂಸ್ ಆ್ಯಪ್ – Click Here to Download