2ನೇ ಮಹಾಯುದ್ಧ ಬಾಂಬ್ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Bomb-ww2

ಫ್ರಾಂಕ್‍ಫರ್ಟ್, ಜ.7-ಜರ್ಮನಿಯ ಆರ್ಥಿಕ ರಾಜಧಾನಿ ಫ್ರಾಂಕ್‍ಫರ್ಟ್‍ನ ಮೇನ್ ನದಿಯಲ್ಲಿ ಎರಡನೇ ಮಹಾಯುದ್ಧದ ಕಾಲದ ಬಾಂಬೊಂದು ಪತ್ತೆಯಾಗಿದೆ.  ಫ್ರಾಂಕ್‍ಫರ್ಟ್‍ನಲ್ಲಿ ಪ್ರವಹಿಸುವ ಈ ನದಿಯಲ್ಲಿ ಬುಧವಾರ ಸೇನಾ ಸಿಬ್ಬಂದಿಗಾಗಿ ತರಬೇತಿ ನಡೆಯುತ್ತಿತ್ತು. ರಕ್ಷಣಾ ಮುಳುಗುಗಾರರು ಆಳವಾದ ಜಲಪ್ರದೇಶದಿಂದ ಸಂತ್ರಸ್ತರನ್ನು ರಕ್ಷಿಸುವ ತರಬೇತಿ ವೇಳೆ ಸ್ಕೂಬಾ ಡೈವರ್‍ಗಳಿಗೆ ನದಿಯ ಗರ್ಭದಲ್ಲಿದ್ದ ಬಾಂಬ್ ಪತ್ತೆಯಾಯಿತು. ಇದನ್ನು ಪರಿಶೀಲಿಸಿದಾಗ ಅದು ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಬಳಸುತ್ತಿದ್ದ ಬಾಂಬ್ ಎಂಬುದು ಕಂಡುಬಂತು.

ನಂತರ ಬಾಂಬ್ ನಿಷ್ಕ್ರಿಯ ದಳ ಮುಂಜಾಗ್ರತಾ ಕ್ರಮವಾಗಿ ಈ ಹಳೆಯ ಬಾಂಬನ್ನು ನಿಷ್ಕ್ರಿಯಗೊಳಿಸಿದೆ. ನದಿಯ ಸೇತುವೆ ಮತ್ತು ಅದರ ಉದ್ದಕ್ಕೂ ಹಾದುಹೋಗುವ ರಸ್ತೆಯನ್ನು ಕೆಲಕಾಲ ಬಂದ್ ಮಾಡಲಾಗಿತ್ತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin