2 ಬಸ್ ನಡುವೆ ಸಿಲುಕಿ ಸಾವನ್ನಪ್ಪಿದ ನತದೃಷ್ಟ ಬಿಎಂಟಿಸಿ ಚಾಲಕ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

BMTC-Bus

ಬೆಂಗಳೂರು, ಜ.7- ವಾಹನದ ಕನ್ನಡಿ ಒರೆಸುವಾಗ ಆಕಸ್ಮಿಕವಾಗಿ ಬಸ್ ಮುಂದೆ ಚಲಿಸಿ ಮತ್ತೊಂದು ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೆಜೆಸ್ಟಿಕ್‍ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಸಂಭವಿಸಿದೆ. ಮೂಲತಃ ಮಂಡ್ಯದವರಾದ ರಮೇಶ್(42) ಮೃತಪಟ್ಟ ನತದೃಷ್ಟ ಬಿಎಂಟಿಸಿ ಬಸ್ ಚಾಲಕ. ಇಂದು ಬೆಳಗ್ಗೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಈ ದುರ್ಘಟನೆ ಸಂಭವಿಸಿದೆ.  ಚಾಲನೆಯಲ್ಲಿರಿಸಿಕೊಂಡೆ ಇಳಿಜಾರಿನಲ್ಲಿ ಬಸ್ ನಿಲ್ಲಿಸಿ ಹೊರಗೆ ಬಂದು ಕನ್ನಡಿ ಒರೆಸಿಕೊಳ್ಳುವಾಗ ಬಸ್ ಆಕಸ್ಮಿಕವಾಗಿ ಮುಂದೆ ಚಲಿಸಿ ಮತ್ತೊಂದು ಬಸ್‍ಗೆ ಡಿಕ್ಕಿ ಹೊಡೆದಿದೆ.

ಈ ವೇಳೆ ಎರಡು ಬಸ್‍ಗಳ ನಡುವೆ ಸಿಲುಕಿ ಗಂಭೀರವಾಗಿ ಗಾಯಗೊಂಡ ಚಾಲಕ ರಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ಉಪ್ಪಾರಪೇಟೆ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin