ಉತ್ತರಪ್ರದೇಶದ ಕಾನ್ಪುರ ಬಳಿ ರೈಲು ಹಳಿಗೆ ಹಾನಿ ; ವಿಧ್ವಂಸಕ ಕೃತ್ಯ ಶಂಕೆ, ಸಿಬಿಐ ತನಿಖೆಗೆ ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

Railway-Track

ಕಾನ್ಪುರ, ಜ.8- ಉತ್ತರಪ್ರದೇಶದ ಕಾನ್ಪುರ ಬಳಿ ರೈಲ್ವೆ ಹಳಿಯ ಫಿಶ್‍ಪ್ಲೇಟ್ ಮತ್ತು ಎಲಾಸ್ಟಿಕ್ ಕ್ಲಿಪ್‍ಗಳನ್ನು ಕಿತ್ತು ಹಾಕಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದೊಂದು ವಿಧ್ವಂಸಕ ಕೃತ್ಯವೆಂದು ಶಂಕಿಸಿರುವ ರೈಲ್ವೆ ಇಲಾಖೆಯು ಕೃತ್ಯದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಗ್ಯಾಂಗ್‍ಮನ್‍ಗಳ ಗಸ್ತು ತಂಡವೊಂದು ಜ.1ರಂದು ಈ ಮಾರ್ಗದಲ್ಲಿ ದುಷ್ಕರ್ಮಿಗಳ ಕೃತ್ಯವನ್ನು ಸಕಾಲದಲ್ಲಿ ಪತ್ತೆ ಮಾಡಿದ್ದರಿಂದ ಸಾವು-ನೋವಿನ ಭಾರೀ ಸಂಭಾವ್ಯ ದುರಂತ ತಪ್ಪಿದೆ.  ಫರುಖಾಬಾದ್-ಕಾನ್ಪುರ ಅನ್ವರ್‍ಜಂಗ್ ವಿಭಾಗದ ಕಲ್ಯಾಣಪುರ-ಮಂಧಾನಾ ನಿಲ್ದಾಣಗಳ ಮಧ್ಯೆ ಈ ಕೃತ್ಯ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಫಿಶ್‍ಪ್ಲೇಟ್ ಮತ್ತು ಎಲಾಸ್ಟಿಕ್ ಕ್ಲಿಪ್‍ಗಳನ್ನು ಕಿತ್ತು ಹಾಕಿದ್ದರಲ್ಲದೇ ಹ್ಯಾಕ್‍ಸಾ ಗರಗಸ ಸಾಧನದಿಂದ ಹಳಿಗಳಿಗೆ ಸಾಕಷ್ಟು ಹಾನಿ ಉಂಟು ಮಾಡಿದ್ದರು.

ಇದರಿಂದಾಗಿ ಹೊಸ ವರ್ಷದ ದಿನವೇ ಸಂಭಾವ್ಯ ಅನಾಹುತದಿಂದ ಪಯಾಣಿಕರು ಪಾರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಜ.2ರ ಲಕ್ನೋ ರ್ಯಾಲಿಗೆ ಮುನ್ನ ನಡೆದ ಈ ಘಟನೆ ವಿಧ್ವಂಸಕ ಕೃತ್ಯವೆಂದು ರೈಲ್ವೆ ಶಂಕಿಸಿದೆ. ಈ ಕುರಿತು ವಿವರವಾದ ತನಿಖೆ ನಡೆಸುವಂತೆ ಕೋರಿ ಸಿಬಿಐಗೆ ಪತ್ರ ಬರೆದಿರುವುದಾಗಿ ರೈಲ್ವೆ ರಕ್ಷಣಾ ಪಡೆ (ಆರ್‍ಪಿಎಫ್) ಮಹಾ ನಿರ್ದೇಶಕ ಎಸ್.ಕೆ. ಭಗತ್ ತಿಳಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin