ಪ್ರಮೋದ್ ಮುತಾಲಿಕ್‍ಗೆ ಕೊಲೆ ಬೆದರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Pramod-Muthalik

ಬೆಳಗಾವಿ, ಜ.8– ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರಿಗೆ ಅಪರಿಚಿತ ವ್ಯಕ್ತಿಗಳಿಂದ ಜೀವ ಬೆದರಿಕೆ ಕರೆ ಬಂದಿರುವ ಬಗ್ಗೆ ಇಲ್ಲಿನ ಉದ್ಯಮ ಭಾಗ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಇದೇ ತಿಂಗಳ 6ರಂದು ಅಪರಿಚಿತ ವ್ಯಕ್ತಿಗಳು ನಾಲ್ಕು ಬಾರಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.  6ರಂದು ಬೆಳಗ್ಗೆ 8.38, 9.30, ಸಂಜೆ 4.30, ರಾತ್ರಿ 8 ಗಂಟೆಗೆ ಸತತ ನಾಲ್ಕು ಬಾರಿ ಕರೆ ಮಾಡಿದ ದುಷ್ಕರ್ಮಿಗಳು ಮಂಗಳೂರು ಭಾಷೆ, ಕನ್ನಡ, ತುಳು, ಹಿಂದಿಯಲ್ಲಿ ಮಾತನಾಡಿ ಬೆದರಿಕೆ ಹಾಕಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin