ಹಿಟ್ ಅಂಡ್ ರನ್’ಗೆ ನಾಲ್ವರು ಕೂಲಿ ಕಾರ್ಮಿಕರು ಬಲಿ : ಮಾಜಿ ಶಾಸಕ ಮತ್ತು ಪುತ್ರನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Hit-and-Run

ಲಕ್ನೋ, ಜ.8-ಮಾಜಿ ಶಾಸಕ ಮತ್ತು ಆತನ ಮಗನಿದ್ದ ಕಾರೊಂದು ರಾತ್ರಿ ತಂಗುದಾಣದ ಗುಡಿಸಲೊಂದಕ್ಕೆ ರಭಸದಿಂದ ನುಗ್ಗಿದ ಪರಿಣಾಮ ಮಲಗಿದ್ದ ನಾಲ್ವರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟು, ಇತರ ಆರು ಮಂದಿ ತೀವ್ರ ಗಾಯಗೊಂಡಿರುವ ಘಟನೆ ಇಂದು ನಸುಕಿನಲ್ಲಿ ಉತ್ತರಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಡೆದಿದೆ.  ಅತ್ಯಂತ ವೇಗವಾಗಿ ಬಂದ ಹ್ಯುಂಡೈ ಐ20 ಕಾರು 35 ಮಂದಿ ಕಾರ್ಮಿಕರು ಮಲಗಿದ್ದ ರಾತ್ರಿ ತಂಗುದಾಣದ ಗುಡಿಸಲು (ನೈಟ್ ಶೆಲ್ಟರ್) ನುಗ್ಗಿತು. ಈ ದುರಂತದಲ್ಲಿ ಪೂರ್ವ ಉತ್ತರಪ್ರದೇಶದ ನಾಲ್ವರು ದಿನಗೂಲಿ ಕಾರ್ಮಿಕರು ಸಾವಿಗೀಡಾದರು.

ಈ ಭೀಕರ ಅಪಘಾತ ಸಂಭವಿಸಿದಾಗ ಕಾರಿನಲ್ಲಿದ್ದ ಮಾಜಿ ಶಾಸಕ ಮತ್ತು ಮಗ ಪಾನಮತ್ತರಾಗಿದ್ದರು. ಅತಿ ವೇಗ ಮತ್ತು ನಿರ್ಲಕ್ಷ್ಯ ಚಾಲನೆ ಈ ಘಟನೆಗೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.  ಮದ್ಯದ ನಿಶೆಯಲ್ಲಿದ್ದ ಇವರಿಬ್ಬರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.  ಈ ಘಟನೆಯು ಶಂಕರ್‍ನಾಗ್ ಅಭಿನಯದ ಸೂಪರ್‍ಹಿಟ್ ಆಕ್ಸಿಡೆಂಟ್ ಸಿನಿಮಾ ದೃಶ್ಯವನ್ನು ನೆನೆಪಿಗೆ ತರುವಂತಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin