‘ಪ್ರವಾಸಿ ಭಾರತೀಯ ದಿವಸ್’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಷಣ

ಈ ಸುದ್ದಿಯನ್ನು ಶೇರ್ ಮಾಡಿ

Narendra-Modi---c

ಬೆಂಗಳೂರು,ಜ.8-ವಿದೇಶದಲ್ಲಿ ಉದ್ಯೋಗವನ್ನರಸಿ ಹೋಗುವ ಭಾರತೀಯ ಪ್ರತಿಭಾವಂತರಿಗೆ ವಿಶೇಷ ತರಬೇತಿ ನೀಡುವ ಉದ್ದೇಶದಿಂದ ಶೀಘ್ರದಲ್ಲೇ ಪ್ರವಾಸಿ ಕೌಶಲ್ ವಿಕಾಸ್ ಯೋಜನೆ ಆರಂಭಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಘೋಷಣೆ ಮಾಡಿದರು.   ಉದ್ಯಾನನಗರಿ ಬೆಂಗಳೂರಿನಲ್ಲಿ ಇಂದು ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದ 2ನೇ ದಿನದ ಸಮಾರಂಭಕ್ಕೆ ಚಾಲನೆ ನೀಡಿ ಮೋದಿ ಮಾತನಾಡಿದರು.  ಭಾರತದ ಪ್ರತಿಭಾವಂತ ಯುವಕ, ಯುವತಿಯರಿಗೆ ವಿದೇಶದಲ್ಲಿ ಕೆಲಸ ಮಾಡುವವರಿಗೆ ಕೌಶಲ್ಯಾಭಿವೃದ್ಧಿ ವಿಶೇಷ ತರಬೇತಿ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಭಾರತೀಯ ಯುವಕ , ಯುವತಿಯರಿಗೆ ವಿದೇಶದಲ್ಲಿ ಕೆಲಸ ಕೊಡಿಸುವ ಆಮೀಷವೊಡ್ಡಿ ವಂಚಿಸುತ್ತಿರುವ ಕಾನೂನು ಬಾಹಿರ ಏಜೆನ್ಸಿಗಳ ಮೇಲೆ ನಿಗಾ ಇಡುವ ಜೊತೆಗೆ ಅಂತಹ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಮೋದಿ ಎಚ್ಚರಿಸಿದರು.  ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯಮ ಕ್ಷೇತ್ರಕ್ಕೆ ಅನಿವಾಸಿ ಭಾರತೀಯರು ನೀಡಿರುವ ಕೊಡುಗೆ ಅಪಾರವಾದದ್ದು ಎಂದು ಪ್ರಶಂಸಿಸಿದ ಮೋದಿ, 30 ದಶಲಕ್ಷಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಇದ್ದಾರೆ. ಅವರು ಎಲ್ಲೆ ಇರಲಿ ತಾಯ್ನಾಡಿಗೆ ನೀಡಿರುವ ಕೊಡುಗೆಯಿಂದಾಗಿ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

ಎನ್‍ಆರ್‍ಐಗಳಿಗೆ ತಾಯ್ನಾಡಾದ ಭಾರತ ಧರ್ಮ ಭೂಮಿಯಾಗಿದೆ. ಅವರು ಇರುವ ಜಾಗವು ಕರ್ಮ ಭೂಮಿಯಾಗಿದೆ ಎಂದು ಬಣ್ಣಿಸಿದ ಮೋದಿ, ಎಲ್ಲೆ ಇರಲಿ ಅವರು ಆ ದೇಶದ ಸಂಸ್ಕøತಿಗೆ ಒಗ್ಗಿಕೊಂಡಿದ್ದಾರೆ ಜೊತೆಗೆ ಭಾರತೀಯ ಸಂಸ್ಕøತಿಯನ್ನೂ ಉಳಿಸಿ, ಬೆಳೆಸಿದ್ದಾರೆ ಎಂದು ಶ್ಲಾಘಿಸಿದರು.  ಭಾರತದ ಅಭಿವೃದ್ಧಿಯಲ್ಲಿ ಅನಿವಾಸಿ ಭಾರತೀಯರ ಪಾಲು ಕೂಡ ಇದೆ. ಅವರ ಸುರಕ್ಷತೆಗೆ ಭಾರತ ಆದ್ಯತೆ ನೀಡುತ್ತದೆ. ನಾನು ಪಾರ್ಸ್‍ಪೆÇೀ ರ್ಟ್ ಬಣ್ಣವನ್ನು ನೋಡುವುದಿಲ್ಲ. ಆ ದೇಶದೊಂದಿಗಿರುವ ಸಂಬಂಧವನ್ನು ನೋಡುತ್ತೇನೆ ಎಂದರು.  ಅನಿವಾಸಿ ಭಾರತೀಯರ ಅನುಕೂಲಕ್ಕಾಗಿ ನಮ್ಮಿಂದ ಎಲ್ಲ ರೀತಿಯ ಸಹಾಯ, ಸಹಕಾರಗಳನ್ನು ನೀಡಲಾಗುವುದು ಎಂದ ಅವರು, ಸೋಷಿಯಲ್ ಮೀಡಿಯಾಗಳ ಮೂಲಕ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ಸಮಸ್ಯೆ, ಸಂಕಷ್ಟಗಳಿಗೆ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ನೀಡಿದ ನೆರವು ಮಾದರಿಯಾಗಿದೆ ಇದಕ್ಕೆ ಅವರನ್ನು ಅಭಿನಂದಿಸುತ್ತೇವೆ ಎಂದರು.

ಸೋಷಿಯಲ್ ಮೀಡಿಯಾ ವೇದಿಕೆ ಮೂಲಕ ನೆರವು ಕಲ್ಪಿಸಲು ಮುಂದಾಗಿದ್ದು, ಅನಿವಾಸಿ ಭಾರತೀಯ ಮಹಿಳೆಯರಿಗೂ ವಿಶೇಷ ಆದ್ಯತೆ ನೀಡಲಾಗುವುದು. ರಾಯಭಾರಿ ಕಚೇರಿಗಳಲ್ಲಿ 24 ಗಂಟೆಗಳ ಸಹಾಯವಾಣಿ ತೆರೆಯಲಾಗುವುದು. ಈ ಮೂಲಕ ಅನಿವಾಸಿ ಭಾರತೀಯರಿಗೆ ಅಗತ್ಯ ಮಾಹಿತಿಗಳನ್ನು ಒದಗಿಸಲಾಗುವುದು ಎಂದು ಹೇಳಿದರು. ಭಾರತದ ವಿಕಾಸ ಯಂತ್ರದಲ್ಲಿ ಅನಿವಾಸಿ ಭಾರತೀಯರ ಒಡನಾಟದಿಂದ ಪ್ರಗತಿಯಾತ್ರೆಯಾಗಿದೆ ಎಂದು ಬಣ್ಣಿಸಿದ ಅವರು, ಭಾರತದ ಪ್ರಗತಿ ಅನಿವಾಸಿ ಭಾರತೀಯರಿಂದ ಸಾಧ್ಯ. ನಾನಾ ಕ್ಷೇತ್ರಗಳ ನಾನಾ ವೃತ್ತಿಯಲ್ಲಿ ಭಾರತೀಯರು ಮುಂಚೂಣಿಯಲ್ಲಿದ್ದಾರೆ ಎಂದರು.  ಪ್ರವಾಸಿ ಭಾರತೀಯ ದಿವಸ್‍ನ್ನು ಮಹಾತ್ಮಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ಮಹತ್ವ ದಿನದ ನೆನಪಿನ ದಿನವನ್ನಾಗಿ ಆಚರಿಸಲಾಗುತ್ತಿದೆ.

ಎಫ್‍ಡಿಐ ಎಂಬುದಕ್ಕೆ ಎರಡು ಅರ್ಥವಿದೆ. ವಿದೇಶ ನೇರ ಬಂಡವಾಳ ಇದನ್ನು ನಾವು ಫಾಸ್ಟ್ ಡೆವೆಲಪ್‍ಮೆಂಟ್ ಇಂಡಿಯಾ ಎಂಬ ಪರಿಕಲ್ಪನೆಗೆ ಅಳವಡಿಸಿಕೊಳ್ಳೋಣ ಎಂದು ಮೋದಿ ಹೇಳಿದರು.  ಈ ಪರಿಕಲ್ಪನೆಯಡಿ ಮಾರ್ಗದರ್ಶಿ ಸೂತ್ರಗಳನ್ನು ಸರಳೀಕರಣಗೊಳಿಸಿ ಭಾರತವನ್ನು ಅಭಿವೃದ್ದಿಪಥದತ್ತ ಸಾಗಲು ಈಗಾಗಲೇ ಡಿಜಿಟಲ್ ಇಂಡಿಯಾ, ಸ್ವಚ್ಛ ಭಾರತ್, ನಮಾಮಿ ಗಂಗೆ, ಸ್ಟಾರ್ಟಪ್‍ನಂತಹ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ ಎಂದು ತಿಳಿಸಿದರು.  ಕಪ್ಪು ಹಣ ನಿಯಂತ್ರಣಕ್ಕೆ ನೋಟು ಬದಲಾವಣೆ ಕ್ರಮವನ್ನು ಅನಿವಾಸಿ ಭಾರತೀಯರು ಕೂಡ ಸ್ವಾಗತಿಸಿದ್ದು, 30 ಮಿಲಿಯನ್‍ಗೂ ಅಧಿಕ ಅನಿವಾಸಿ ಭಾರತೀಯರು ನೋಟ್ ಬ್ಯಾನ್ ಶ್ಲಾಘಿಸಿದ್ದಾರೆ ಎಂದರು.  ನೋಟು ಬದಲಾವಣೆ ಮಾಡಿಕೊಳ್ಳಲು ಅನಿವಾಸಿ ಭಾರತೀಯರಿಗೆ ಮಾ.31ರವರೆಗೆ ನೀಡಿದ್ದ ಅವಧಿಯನ್ನು ಜೂ.30ರವರೆಗೆ ವಿಸ್ತರಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ತಿಳಿಸಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

 

Facebook Comments

Sri Raghav

Admin