ಔಷಧಿ ಗುಣಗಳ ಆಗರ ‘ಕಪ್ಪು ಉಪ್ಪು’

ಈ ಸುದ್ದಿಯನ್ನು ಶೇರ್ ಮಾಡಿ

Black-Salt-01

ಉಪ್ಪು ಎಷ್ಟು ಅನಿವಾರ್ಯ ಎಂಬುದು ತಿಳಿದ ವಿಷಯವೇ. ಆದರೆ ಕಪ್ಪು ಉಪ್ಪು ಸಹ ಭಾರತೀಯರಲ್ಲಿ ಹಿಂದಿನಿಂದಲೂ ಬಳಕೆಯಲ್ಲಿದೆ. ಈ ಕಪ್ಪು ಉಪ್ಪು ಸಹ ಔಷಧೀಯ ಗುಣಗಳ ಆಗರವೇ ಆಗಿದೆ.  ಹಿಮಾಲಯದ ಕಪ್ಪು ಉಪ್ಪು ಅಥವಾ ಆಂಗ್ಲ ಭಾಷೆಯಲ್ಲಿ ಹೇಳುವುದಾದರೆ ಭಾರತೀಯ ಕಪ್ಪು ಉಪ್ಪು ಎಂದೇ ಪ್ರಚಲಿತದಲ್ಲಿದೆ. ಕಲ್ಲುಪ್ಪಿನ ಮಾದರಿಯಲ್ಲಿ ಸಿಗುವ ಇದರ ಬಣ್ಣ ಕಡುಗೆಂಪು, ಕಪ್ಪು ಮತ್ತು ಕಟು ವಾಸನೆ ಹಾಗೂ ಗಂಧಕ ವಾಸನೆ ಹೊಂದಿರುತ್ತದೆ.ಕಪ್ಪು ಉಪ್ಪಿನ ಪುಡಿ ಗುಲಾಬಿ, ಬೂದು ಅಥವಾ ನೇರಳೆಬಣ್ಣ ಹೊಂದಿದ್ದು, ಇದನ್ನು ಕಲಾ ಅಲೆಮಾರಿ, ಬ್ಲಾಕ್ ಉಪ್ಪು, ಹಿಮಾಲಯದ ಕಪ್ಪು ಉಪ್ಪು, ಭಾರತೀಯ ಕಪ್ಪು ಉಪ್ಪು, ಕಲಾ ನಮಕ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.

ಸೋಡಿಯಂ ಕ್ಲೋರೈಡ್ ಮತ್ತು ಸೋಡಿಯಂ ಸಲ್ಫೈಟ್, ಮೆಗ್ನಿಷಿಯಂ, ಫೆರಸ್ ಸಲ್ಫೇಟ್ ರೂಪದಲ್ಲಿ ಕಬ್ಬಿಣ, ಗ್ರಿಗೈಟ್, ಕಬ್ಬಿಣದ ಆಕ್ಸೈಡ್ ಸೇರಿದಂತೆ ಇನ್ನಿತರ ಖನಿಜಗಳು ಹಾಗೂ ರಾಸಾಯನಿಕ ಸಂಯುಕ್ತಗಳನ್ನು ಒಳಗೊಂಡು ರಚಿತವಾಗಿರುವ ಕಪ್ಪು ಉಪ್ಪು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ಆದರೆ ಇದರ ಬಳಕೆ ಮಾತ್ರ ಹಲವರಿಗೆ ತಿಳಿದಿಲ್ಲ. ಇದರಿಂದ ಸಾಕಷ್ಟು ಪ್ರಯೋಜನಗಳಿದ್ದು, ಕಪ್ಪು ಉಪ್ಪು ಜೀರ್ಣ ಶಕ್ತಿಗೆ ಸಹಕಾರಿಯಾಗಿದೆ. ಉತ್ತಮ ನಿದ್ರೆಗೆ ಕಾರಣವಾಗುವುದಲ್ಲದೆ, ಗಂಟಲು ಕೆರೆತವನ್ನು ನಿವಾರಿಸುತ್ತದೆ. ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ರಕ್ತದ ಪ್ರಮಾಣವನ್ನು ಹೆಚ್ಚಿಸಿ ಆಸಿಡಿಟಿ ನಿವಾರಣೆಗೂ ಕಾರಣವಾಗಲಿದೆ. ಬ್ಯಾಕ್ಟೀರಿಯಾ ನಿರೋಧಕವಾಗಿರುವ ಕಪ್ಪು ಉಪ್ಪು ಬೊಜ್ಜು ಕರಗಿಸುವಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin