ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-01-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಹೇಗೆ ಯಾವಾಗಲೂ ನೆರಳು-ಬಿಸಿಲುಗಳು ಒಂದರೊಡನೊಂದು ಕೂಡಿಯೇ ಇರುವುವೋ ಹಾಗೆಯೇ ಎಲ್ಲ ಜೀವಿಗಳಲ್ಲಿಯೂ ಕರ್ಮವೂ ಕರ್ಮ ಮಾಡುವವನೂ ಕೂಡಿಯೇ ಇರುವರು. – ಸುಭಾಷಿತಸುಧಾನಿಧಿ

Rashi

ಪಂಚಾಂಗ : ಮಂಗಳವಾರ, 10.01.2017

ಸೂರ್ಯ ಉದಯ ಬೆ.06.45 / ಸೂರ್ಯ ಅಸ್ತ ಸಂ.06.10
ಚಂದ್ರ ಉದಯ ಸಂ.04.11 / ಚಂದ್ರ ಅಸ್ತ ರಾ.05.17
ದುರ್ಮುಖಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ /
ತಿಥಿ: ತ್ರಯೋದಶಿ (ರಾ.10.54) / ನಕ್ಷತ್ರ: ರೋಹಿಣಿ-ಮೃಗಶಿರ (ಬೆ.07.56-ರಾ.05.33)
ಯೋಗ: ಶುಕ್ಲ-ಬ್ರಹ್ಮ (ಬೆ.09.02-ರಾ.05.16) / ಕರಣ: ಕೌಲವ-ತೈತಿಲ (ಮ.12.28-ರಾ.10.54)
ಮಳೆ ನಕ್ಷತ್ರ: ಉತ್ತರಾಷಾಢ (ಪ್ರ.ರಾ.01.06) / ಮಾಸ: ಧನಸ್ಸು / ತೇದಿ: 27

ರಾಶಿ ಭವಿಷ್ಯ :

ಮೇಷ : ಸಾಂಸಾರಿಕವಾಗಿ ಹೊಂದಾಣಿಕೆ ಮಾಡಿಕೊಳ್ಳಿ
ವೃಷಭ : ವ್ಯಾಪಾರ-ವ್ಯವಹಾರಗಳಲ್ಲಿ ಲಾಭ-ನಷ್ಟಗಳು ಸಮನಾಗಿ ಇರುತ್ತವೆ, ದೇವತಾ ಕಾರ್ಯಗಳಿಗೆ ಸಕಾಲ
ಮಿಥುನ: ವೃತ್ತಿರಂಗದಲ್ಲಿ ಅಪವಾದ, ಭೀತಿ ಉಂಟಾಗಲಿದೆ
ಕಟಕ: ಮಕ್ಕಳ ವಿದ್ಯಾಭ್ಯಾಸದ ಖರ್ಚು ಅಧಿಕವಾದೀತು
ಸಿಂಹ: ಇತರರಿಂದ ಅನಾವಶ್ಯಕ ವಾಗಿ ಕೆಟ್ಟ ಮಾತು ಕೇಳಿ ಬರಲಿವೆ
ಕನ್ಯಾ: ವಿದ್ಯಾರ್ಥಿಗಳಿಗೆ ಅಭ್ಯಾಸ ದಲ್ಲಿ ಆಗಾಗ ನಿರುತ್ಸಾಹ ಕಾಡಲಿದೆ
ತುಲಾ: ವೃತ್ತಿರಂಗದಲ್ಲಿ ಮುನ್ನಡೆ ಸಾಧಿಸುವ ಸಾಧ್ಯತೆಗಳು ಇವೆ
ವೃಶ್ಚಿಕ : ಮನೆಯಲ್ಲಿ ಹೆಂಡತಿ- ಮಕ್ಕಳ ಅನಾರೋಗ್ಯದಿಂದ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ
ಧನುಸ್ಸು: ಅಲಂಕಾರಿಕ ವಸ್ತುಗಳ ಖರೀದಿಯಿಂದ ಸಂತಸ ಪಡುವಿರಿ
ಮಕರ: ಹೊಸ ಯೋಜನೆಗಳ ಚಿಂತನೆಗೆ ಇದು ಸಕಾಲ, ನೆರೆಹೊರೆಯವರಿಂದ ಕಿರಿಕಿರಿಗೆ ಒಳಗಾಗುವಿರಿ
ಕುಂಭ: ಸಾಂಸಾರಿಕವಾಗಿ, ಮಾನಸಿಕವಾಗಿ, ಕೌಟುಂಬಿಕ ವಾಗಿ ಆಗಾಗ ಕಿರಿಕಿರಿ ಅನುಭವಿಸಲಿದ್ದೀರಿ
ಮೀನ: ಆರ್ಥಿಕವಾಗಿ ಉತ್ತಮವಿದ್ದರೂ ಅದೇ ಪ್ರಮಾಣ ದಲ್ಲಿ ಖರ್ಚು-ವೆಚ್ಚಗಳಿವೆ, ಕಿರಿಕಿರಿ ಅನುಭವಿಸುವಿರಿ

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin