ಒಂದೇ ಊರಿನಲ್ಲಿ, ಒಂದೇ ರಾತ್ರಿಯಲ್ಲಿ 7 ಕಡೆ ಸರಣಿ ಕಳ್ಳತನ

ಈ ಸುದ್ದಿಯನ್ನು ಶೇರ್ ಮಾಡಿ

Theft

ಕೊರಟಗೆರೆ, ಜ.10- ವೈನ್ ಸ್ಟೋರ್, ಬೇಕರಿ, ಬುಕ್‍ಸ್ಟೋರ್ ಸೇರಿದಂತೆ ಒಂದೇ ಊರಿನಲ್ಲಿ ಏಳು ಕಡೆ ಕಳ್ಳತನ ಮಾಡಿರುವ ಘಟನೆ ಕೊರಟಗೆರೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಇರಕಸಂದ್ರ ಕಾಲೋನಿಯಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ. ನಿನ್ನೆ ಮಧ್ಯರಾತ್ರಿ ಏಳು ಅಂಗಡಿಗಳ ಶೆಟರ್ ಮುರಿದು ಲಕ್ಷಾಂತರ ರೂ. ನಗದು, ಮೊಬೈಲ್ ಸೇರಿದಂತೆ ಹಲವು ವಸ್ತುಗಳನ್ನು ಕಳವು ಮಾಡಲಾಗಿದೆ. ವೈನ್‍ಸ್ಟೋರ್, ಎರಡು ಬೇಕರಿ, ಎರಡು ಬುಕ್‍ಸ್ಟೋರ್, ದಿನಸಿ ಅಂಗಡಿಗಳ ಶೆಟರ್ ಮುರಿದು ಕಳವು ಮಾಡಲಾಗಿದೆ. ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಕೊರಟಗೆರೆ ಪೊಲೀಸ್ ಸಿಪಿಐ ಮುನಿರಾಜು, ಪಿಎಸ್‍ಐ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin