ಕೆಎಸ್‍ಎಸ್ ಸಂಸ್ಕೃತ ಪಾಠಶಾಲೆಗೆ ಬಹುಮಾನ

ಈ ಸುದ್ದಿಯನ್ನು ಶೇರ್ ಮಾಡಿ

NANJANAGUSU

ನಂಜನಗೂಡು, ಜ.10- ಮೈಸೂರಿನ ಶ್ರೀ ಮಹಾರಾಜ ಸಂಸ್ಕೃತ  ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಸಂಸ್ಕೃತ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಕೆಎಸ್‍ಎಸ್ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳು ಬಹುಮಾನ ಪಡೆದರು.ರಾಜ್ಯದ ಎಲ್ಲಾ ವಿಭಾಗಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದ ಸ್ಪರ್ಧಾರ್ಥಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ನಮ್ಮ ಪಾಠಶಾಲೆಯ ವಿದ್ಯಾರ್ಥಿ ಭಾರಧ್ವಾಜ್ ಹೆಚ್.ಪಿ. ಸಾಹಿತ್ಯ ವಿಭಾಗದ ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ಜಗತಿ ಯೋಗಸ್ಯ ಪ್ರಭಾವ: ಎಂಬ ವಿಷಯದ ಕುರಿತು ಭಾಷಣ ಮಾಡಿ, ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದರೆ ಮನೋಹರ ಕೆ.ಎನ್ ಈ ವಿದ್ಯಾರ್ಥಿ ಪ್ರಥಮ ವಿಭಾಗದಲ್ಲಿ ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದು ಈ ಶಾಲೆಯ ಹಾಗೂ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಶಾಲೆ ಮುಖ್ಯೋಪಾಧ್ಯಾಯಿನಿ ಅಭಿನಂದಿಸಿದ್ದಾರೆ.ಈ ಸಾಧನೆಗೆ ಶಿಕ್ಷಕರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin