ಡ್ಯಾನ್ಸ್ ಮಾಸ್ಟರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಆನೇಕಲ್, ಜ.9-ಡ್ಯಾನ್ಸ್ ಮಾಸ್ಟರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮತ್ತಿಬ್ಬರು ಆರೋಪಿಗಳಿಗಾಗಿ ತೀವ್ರ ಶೋಧ ಮುಂದುವರೆಸಿದ್ದಾರೆ.ಹೇಮಂತ, ತಳಿ ಮಂಜ, ರಾಜ ಬಂಧಿತ ಆರೋಪಿಗಳು. ಕಳೆದ ಡಿ.31 ರ ರಾತ್ರಿ ಆನೇಕಲ್‍ನ ಐಶ್ವರ್ಯ ಬಾರ್‍ನಲ್ಲಿ ನಡೆದ ಡ್ಯಾನ್ಸ್ ಮಾಸ್ಟರ್ ಹತ್ಯೆಪ್ರಕರಣದಲ್ಲಿ ಸ್ಥಳೀಯ ಬಿಜೆಪಿ ಮುಖಂಡ, ಆನೇಕಲ್ ಪುರಸಭೆ ಮಾಜಿ ಅಧ್ಯಕ್ಷ, ರೌಡಿಶೀಟರ್ ವಿ.ನಾಗರಾಜ್ ಹಾಗೂ ಅವರ ಮಗ ಚರಣ್ ಕೈವಾಡವಿದೆ ಎಂದು ಶಂಕಿಸಲಾಗಿದ್ದು, ಇವರಿಗಾಗಿ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ.ರೌಡಿಶೀಟರ್ ವಿ.ನಾಗರಾಜ್ ಬಡ್ಡಿ ವ್ಯವಹಾರ ನಡೆಸುತ್ತಿದ್ದು, ಬಡ್ಡಿ ವಸೂಲಿ ಮಾಡುತ್ತಿದ್ದ. ಯುವಕರೊಂದಿಗೆ ಸೇರಿ ಡಿ.31 ರ ರಾತ್ರಿ ಈ ಹತ್ಯೆ ನಡೆದಿದೆ.ಈ ಹತ್ಯೆಯಲ್ಲಿ ನಾಗರಾಜ್ ಮಗ ಚರಣ್ ಕೂಡ ಭಾಗಿಯಾಗಿದ್ದ ಎನ್ನಲಾಗಿದ್ದು, ಪೊಲೀಸರು ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin