ನೀತಿ-ಸಂಹಿತೆ ಉಲ್ಲಂಘಿಸಿದ ಸಾಕ್ಷಿ ಮಹಾರಾಜ್‍ಗೆ ಚುನಾವಣಾ ಆಯೋಗ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

Sakshi-Maharaj

ನವದೆಹಲಿ, ಜ.10 – ಬಾಯಿಗೆ ಬಂದಂತೆ ಮಾತನಾಡಿ ಚುನಾವಣಾ ನೀತಿ-ಸಂಹಿತೆ ಉಲ್ಲಂಘಿಸಿರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‍ಗೆ ಚುನಾವಣಾ ಆಯೋಗ ನಿನ್ನೆ ರಾತ್ರಿ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಹೀಗಾಗಿ ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ನೋಟಿಸ್‍ನಲ್ಲಿ ಪ್ರಶ್ನಿಸಲಾಗಿದೆ. ಈ ಸಂಬಂಧ ಪ್ರತ್ಯುತ್ತರ ನೀಡುವಂತೆ ನಾಳೆ ಬೆಳಗ್ಗೆವರೆಗೆ ಅವರಿಗೆ ಕಾಲಾವಕಾಶ ನೀಡಲಾಗಿದೆ.  ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ದಿನಾಂಕ ಘೋಷಿಸಿದ ಜ.4ರಿಂದ ನೀತಿ ಸಂಹಿತೆ ಜಾರಿಯಲ್ಲಿದೆ. ನೀತಿ ಸಂಹಿತೆ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಚುನಾವಣಾ ಆಯೋಗ ಕಳೆದ ರಾತ್ರಿ ಜಾರಿಗೊಳಿಸಿರುವ ನೋಟಿಸ್‍ನಲ್ಲಿ ತಿಳಿಸಿದೆ.

ಮೀರತ್‍ನಲ್ಲಿ ಕಳೆದ ವಾರ ನಡೆದ ಸಂತರ ಸಮ್ಮೇಳನವೊಂದರಲ್ಲಿ ಸಾಕ್ಷಿ ಮಹಾರಾಜ್ ಅವರು ನಾಲ್ವರು ಪತ್ನಿಯರು ಮತ್ತು 40 ಮಕ್ಕಳನ್ನು ಹೊಂದಿರುವ ಮಂದಿಯಿಂದಲೇ ಈ ದೇಶದಲ್ಲಿ ಜನಸಂಖ್ಯೆ ಸಮಸ್ಯೆ ಸೃಷ್ಟಿಯಾಗಿದೆ ಎಂದು ಹೇಳಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin