ಬುಲೆಟ್ ಷೆಲ್‍ಗಳಿಂದ ಅದ್ಭುತ ಕಲಾಕೃತಿಗಳ ಸೃಷ್ಟಿ

ಈ ಸುದ್ದಿಯನ್ನು ಶೇರ್ ಮಾಡಿ
 ಬುಲೆಟ್ ಷೆಲ್‍ಗಳಿಂದ ಅದ್ಭುತ ಕಲಾಕೃತಿಗಳ ಸೃಷ್ಟಿ  ಕಸದಿಂದ ರಸ ಎಂಬ ಗಾದೆ ಮಾತು ಎಲ್ಲಾ ಕಾಲಕ್ಕೂ, ಎಲ್ಲಾ ದೇಶಗಳಿಗೂ ಅನ್ವಯವಾಗುತ್ತದೆ. ತ್ಯಾಜ್ಯ ವಸ್ತುಗಳು ಮತ್ತು ಬಳಸಿ ಬಿಸಾಡಿದ ಸಾಮಗ್ರಿಗಳನ್ನು ಬಳಸಿ ಕಲಾಕೃತಿಗಳನ್ನು ಸೃಷ್ಟಿಸುವುದು ಈಗ ಒಂದು ರೀತಿಯ ಫ್ಯಾಶನ್ ಆಗಿಬಿಟ್ಟಿದೆ. ಕೊಲೊಂಬಿಯಾ ಕಲಾವಿದನೊಬ್ಬ ಬುಲೆಟ್ ಷೆಲ್‍ಗಳನ್ನು ಉಪಯೋಗಿಸಿ ನಿರ್ಮಿಸಿರುವ ಕಲಾಕೃತಿಗಳು ಈಗ ವಿಶೇಷ ಗಮನಸೆಳೆಯುತ್ತಿವೆ.  ಕೊಲಂಬಿಯಾ ಕಲಾವಿದ ಫೆಡೆರಿಕೋ ಉರಿಬೆ, ಕುಂಚ ಮತ್ತು ಚಿತ್ರಾಧಾರದ ಬದಲಿಗೆ ಪೆನ್ಸಿಲ್‍ಗಳು, ಪುಸ್ತಕಗಳು ಮತ್ತು ಪಿಯಾನೋ ಕೀಲಿ ಕೈಗಳಂಥ ಮನೆಯಲ್ಲಿ ಲಭಿಸುವ ವಸ್ತುಗಳನ್ನು ಉಪಯೋಗಿಸಿ ಕಲಾಕೃತಿಗಳನ್ನು ನಿರ್ಮಿಸುವಲ್ಲಿ ಸಿದ್ಧಹಸ್ತ. ಆದಾಗ್ಯೂ ಈ ಕಲಾವಿದನ ನೆಚ್ಚಿನ ಮಾಧ್ಯಮ ಎಂದರೆ ಉಪಯೋಗಿಸಿದ ಬುಲೆಟ್ ಷೆಲ್‍ಗಳು ಅಂದರೆ ಗುಂಡಿನ ಕವಚಗಳನ್ನು ವರ್ಣರಂಜಿತ ಭೂದೃಶ್ಯಗಳು ಮತ್ತು ಪ್ರಾಣಿ-ಪಕ್ಷಿಗಳ ಶಿಲ್ಪಗಳನ್ನು ಸೃಷ್ಟಿಸುವುದು.  ಈ ಕಲಾವಿದನ ಕಲಾ ನೈಪುಣ್ಯತೆಗೆ ಸಾಕ್ಷಿಯಾಗಿ ನ್ಯೂಯಾರ್ಕ್‍ನ ಅಡೆಲ್ಸನ್ ಗ್ಯಾಲರಿಯೊಂದರಲ್ಲಿ ಕಲಾಕೃತಿಗಳು ಅನಾವರಣಗೊಂಡವು.ಕೊಲಂಬಿಯಾದ ಹಿಂಸಾಚಾರ ಪೀಡಿದ ಬೊಗೊಟಾದಲ್ಲಿ ಜನಿಸಿ ಅಲ್ಲಿನ ಅಶಾಂತಿ ಮತ್ತು ರಕ್ತಪಾತವನ್ನು ಕಣ್ಣಾರೆ ಕಂಡಿರುವ ಕಲಾವಿದ ಉರಿಬೆಗೆ ತನ್ನ ಕಲೆಗೆ ಈ ದುರಂತ ಪ್ರಸಂಗಗಳೇ ಸ್ಫೂರ್ತಿ ಈ ಚಿತ್ರದಲ್ಲಿ ಕಾಣುವ ಪ್ರಾಣಿ-ಪಕ್ಷಿಗಳು ದ್ವಿತೀಯ ಮಹಾಸಂಗ್ರಾಮದ ಹೆಲ್ಮೆಟ್‍ಗಳು ಮತ್ತು ಬುಲೆಟ್‍ಗಳಿಂದ ರೂಪಿಸಲಾಗಿದೆ.  ಇದು ಬುಲೆಟ್ ವೈಲ್ಡ್‍ಲೈಫ್ ಎನ್ನಬಹುದು. ಉರಿಬೆ ಬುಲೆಟ್‍ಗಳನ್ನು ಮಿಯಾಮಿಯ ಲೋಹ ಮರುಬಳಕೆ ಸಂಸ್ಥೆಯಿಂದ ತೂಕದ ಲೆಕ್ಕದಲ್ಲಿ ಖರೀದಿಸಿ ತನ್ನ ಕಲಾ ಯೋಜನೆ ಕಾರ್ಯಗಳಿಗೆ ಬಳಸುತ್ತಾನೆ. ಈತ ಸೃಷ್ಟಿಸಿದ ಪ್ರಾಣಿಗಳ ಕಲಾಕೃತಿಗಳನ್ನು ಪಾರಿತೋಷಕಗಳಾಗಿ ನೀಡಲಾಗುತ್ತಿದೆ. ನಾನು 1000 ಬುಲೆಟ್‍ಗಳನ್ನು ಬಳಸಿ ಒಂದೇ ಒಂದು ಪ್ರಾಣಿಯನ್ನೂ ಕೊಲ್ಲದೇ ಅನಿಮಲ್ ಟ್ರೋಫಿಗಳನ್ನು ರೂಪಿಸಿದ್ದೇನೆ ಎಂದು ಫೆಡೆರಿಕೋ ಹೆಮ್ಮೆಯಿಂದ ಹೇಳುತ್ತಾನೆ.

ಕಸದಿಂದ ರಸ ಎಂಬ ಗಾದೆ ಮಾತು ಎಲ್ಲಾ ಕಾಲಕ್ಕೂ, ಎಲ್ಲಾ ದೇಶಗಳಿಗೂ ಅನ್ವಯವಾಗುತ್ತದೆ. ತ್ಯಾಜ್ಯ ವಸ್ತುಗಳು ಮತ್ತು ಬಳಸಿ ಬಿಸಾಡಿದ ಸಾಮಗ್ರಿಗಳನ್ನು ಬಳಸಿ ಕಲಾಕೃತಿಗಳನ್ನು ಸೃಷ್ಟಿಸುವುದು ಈಗ ಒಂದು ರೀತಿಯ ಫ್ಯಾಶನ್ ಆಗಿಬಿಟ್ಟಿದೆ. ಕೊಲೊಂಬಿಯಾ ಕಲಾವಿದನೊಬ್ಬ ಬುಲೆಟ್ ಷೆಲ್‍ಗಳನ್ನು ಉಪಯೋಗಿಸಿ ನಿರ್ಮಿಸಿರುವ ಕಲಾಕೃತಿಗಳು ಈಗ ವಿಶೇಷ ಗಮನಸೆಳೆಯುತ್ತಿವೆ.  ಕೊಲಂಬಿಯಾ ಕಲಾವಿದ ಫೆಡೆರಿಕೋ ಉರಿಬೆ, ಕುಂಚ ಮತ್ತು ಚಿತ್ರಾಧಾರದ ಬದಲಿಗೆ ಪೆನ್ಸಿಲ್‍ಗಳು, ಪುಸ್ತಕಗಳು ಮತ್ತು ಪಿಯಾನೋ ಕೀಲಿ ಕೈಗಳಂಥ ಮನೆಯಲ್ಲಿ ಲಭಿಸುವ ವಸ್ತುಗಳನ್ನು ಉಪಯೋಗಿಸಿ ಕಲಾಕೃತಿಗಳನ್ನು ನಿರ್ಮಿಸುವಲ್ಲಿ ಸಿದ್ಧಹಸ್ತ. ಆದಾಗ್ಯೂ ಈ ಕಲಾವಿದನ ನೆಚ್ಚಿನ ಮಾಧ್ಯಮ ಎಂದರೆ ಉಪಯೋಗಿಸಿದ ಬುಲೆಟ್ ಷೆಲ್‍ಗಳು ಅಂದರೆ ಗುಂಡಿನ ಕವಚಗಳನ್ನು ವರ್ಣರಂಜಿತ ಭೂದೃಶ್ಯಗಳು ಮತ್ತು ಪ್ರಾಣಿ-ಪಕ್ಷಿಗಳ ಶಿಲ್ಪಗಳನ್ನು ಸೃಷ್ಟಿಸುವುದು.

ಈ ಕಲಾವಿದನ ಕಲಾ ನೈಪುಣ್ಯತೆಗೆ ಸಾಕ್ಷಿಯಾಗಿ ನ್ಯೂಯಾರ್ಕ್‍ನ ಅಡೆಲ್ಸನ್ ಗ್ಯಾಲರಿಯೊಂದರಲ್ಲಿ ಕಲಾಕೃತಿಗಳು ಅನಾವರಣಗೊಂಡವು.ಕೊಲಂಬಿಯಾದ ಹಿಂಸಾಚಾರ ಪೀಡಿದ ಬೊಗೊಟಾದಲ್ಲಿ ಜನಿಸಿ ಅಲ್ಲಿನ ಅಶಾಂತಿ ಮತ್ತು ರಕ್ತಪಾತವನ್ನು ಕಣ್ಣಾರೆ ಕಂಡಿರುವ ಕಲಾವಿದ ಉರಿಬೆಗೆ ತನ್ನ ಕಲೆಗೆ ಈ ದುರಂತ ಪ್ರಸಂಗಗಳೇ ಸ್ಫೂರ್ತಿ ಈ ಚಿತ್ರದಲ್ಲಿ ಕಾಣುವ ಪ್ರಾಣಿ-ಪಕ್ಷಿಗಳು ದ್ವಿತೀಯ ಮಹಾಸಂಗ್ರಾಮದ ಹೆಲ್ಮೆಟ್‍ಗಳು ಮತ್ತು ಬುಲೆಟ್‍ಗಳಿಂದ ರೂಪಿಸಲಾಗಿದೆ. ಇದು ಬುಲೆಟ್ ವೈಲ್ಡ್‍ಲೈಫ್ ಎನ್ನಬಹುದು.

ಉರಿಬೆ ಬುಲೆಟ್‍ಗಳನ್ನು ಮಿಯಾಮಿಯ ಲೋಹ ಮರುಬಳಕೆ ಸಂಸ್ಥೆಯಿಂದ ತೂಕದ ಲೆಕ್ಕದಲ್ಲಿ ಖರೀದಿಸಿ ತನ್ನ ಕಲಾ ಯೋಜನೆ ಕಾರ್ಯಗಳಿಗೆ ಬಳಸುತ್ತಾನೆ. ಈತ ಸೃಷ್ಟಿಸಿದ ಪ್ರಾಣಿಗಳ ಕಲಾಕೃತಿಗಳನ್ನು ಪಾರಿತೋಷಕಗಳಾಗಿ ನೀಡಲಾಗುತ್ತಿದೆ. ನಾನು 1000 ಬುಲೆಟ್‍ಗಳನ್ನು ಬಳಸಿ ಒಂದೇ ಒಂದು ಪ್ರಾಣಿಯನ್ನೂ ಕೊಲ್ಲದೇ ಅನಿಮಲ್ ಟ್ರೋಫಿಗಳನ್ನು ರೂಪಿಸಿದ್ದೇನೆ ಎಂದು ಫೆಡೆರಿಕೋ ಹೆಮ್ಮೆಯಿಂದ ಹೇಳುತ್ತಾನೆ.

Facebook Comments

Sri Raghav

Admin