ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದವರ ಮೇಲೆ ಟ್ರ್ಯಾಕ್ಟರ್ ಹರಿದು ಮೂವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ
Tractor
ಸಾಂಧರ್ಭಿಕ ಚಿತ್ರ

ದಾವಣಗೆರೆ, ಜ.10- ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿಕೊಂಡು ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್ ಹರಿದು ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹೊನ್ನಹಳ್ಳಿ ತಾಲೂಕಿನ ಬಸಪ್ಪ ಪಟ್ಟಣ ರಸ್ತೆಯಲ್ಲಿ ತಡರಾತ್ರಿ ನಡೆದಿದೆ.  ಹಿರೆಕೆರೂರು ತಾಲೂಕಿನ ಕಮಲಾಪುರ ಗ್ರಾಮದ ಪರಮೇಶ್ವರಪ್ಪ (47), ಕರಿಯಪ್ಪ (46) ಹಾಗೂ ಬೆನಕಹಳ್ಳಿ ಗ್ರಾಮದ ಸುರೇಶ್ (39) ಮೃತ ದುರ್ದೈವಿಗಳು. ಸುರೇಶ್ ಎಂಬುವರ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಲು ಜಲ ಪಾಯಿಂಟ್ ಮಾಡಿ ಬೈಕ್‍ನಲ್ಲಿ ಮೂವರು ವಾಪಸ್ ಬರುತ್ತಿದ್ದಾಗ ಬಸಪ್ಪ ಪಟ್ಟಣ ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆಗೆಂದು ಬೈಕ್ ನಿಲ್ಲಿಸಿದ್ದಾರೆ.

ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆ ಎದುರಿನಿಂದ ಬಂದ ಟ್ರ್ಯಾಕ್ಟರ್ ಏಕಾಏಕಿ ಮೂವರ ಮೇಲೆ ಹರಿದಿದ್ದು, ಅವರೆಲ್ಲ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತವೆಸಗಿದ್ದ ಚಾಲಕ ಪರಾರಿಯಾಗಿದ್ದು, ಟ್ರ್ಯಾಕ್ಟರ್‍ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೊನ್ನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin