ಹೊಸ 2000 ರೂ. ನೋಟುಗಳನ್ನು ಪ್ರಿಂಟ್ ಮಾಡುವುದನ್ನು ನಿಲ್ಲಿಸಿಬೇಕು : ಬಾಬಾ ರಾಮದೇವ್

ಈ ಸುದ್ದಿಯನ್ನು ಶೇರ್ ಮಾಡಿ

Baba-Ramadev

ರಾಯ್‍ಪುರ್, ಜ.10-ಇತ್ತೀಚೆಗೆ ಚಲಾವಣೆಗೆ ಬಂದಿರುವ ಹೊಸ ಎರಡು ಸಾವಿರ ರೂಪಾಯಿ ನೋಟುಗಳ ಪ್ರಿಂಟ್ ಮಾಡುವುದನ್ನು ಭವಿಷ್ಯದಲ್ಲಿ ನಿಲ್ಲಿಸಿಬೇಕೆಂದು ಯೋಗಗುರು ಬಾಬಾ ರಾಮ್‍ದೇವ್ ಒತ್ತಾಯಿಸಿದ್ದಾರೆ. ಮೋದಿ ಸರ್ಕಾರ ಐನೂರು ಹಾಗೂ ಸಾವಿರ ರೂಪಾಯಿ ಮುಖಬೆಲೆಯ ನೋಟು ಬ್ಯಾನ್ ಮಾಡಿದ ಬಳಿಕ ಹೊಸ ಎರಡು ಸಾವಿರ ರೂಪಾಯಿ ನೋಟುಗಳು ಚಲಾವಣೆಗೆ ಬಂದಿವೆ.  ಗರಿಷ್ಟ ಮುಖಬೆಲೆಯ ನೋಟುಗಳ ನಿಷೇಧದ ದುಷ್ಪರಿಣಾಮವಾಗಿ 2,000 ರೂಪಾಯಿಯ ನಕಲಿ ನೋಟುಗಳು ಈಗಾಗಲೇ ಮಾರುಕಟ್ಟೆಗೆ ಬಂದಿವೆ. ಮೋದಿ ಬ್ಯಾನ್ ಮಾಡಿರುವ ಗರಿಷ್ಟ ಮುಖಬೆಲೆಯ ನೋಟುಗಳು ಸೃಷ್ಟಿಸಿದ ಸಮಸ್ಯೆಯನ್ನೇ ಈ 2000 ರೂಪಾಯಿ ನೋಟುಗಳು ಸೃಷ್ಟಿಸುತ್ತವೆ ಅಂತ ಬಾಬಾ ರಾಮ್‍ದೇವ್ ಎಚ್ಚರಿಸಿದ್ದಾರೆ.

ಗರಿಷ್ಟ ಮುಖಬೆಲೆಯ ನಕಲಿ ನೋಟುಗಳ ಪ್ರಿಂಟ್ ಹಾಗೂ ಸಾಗಣೆ ಪತ್ತೆ ಮಾಡುವುದು ಕಷ್ಟ. ಹೀಗಾಗಿ ಭವಿಷ್ಯದಲ್ಲಿ ಹೊಸ ಎರಡು ಸಾವಿರ ರೂಪಾಯಿ ನೋಟುಗಳ ಮುದ್ರಣವನ್ನು ನಿಲ್ಲಿಸಬೇಕು ಎಂದಿರುವ ರಾಮ್‍ದೇವ್, ನಾವು ಕ್ಯಾಶ್‍ಲೆಸ್ ವ್ಯವಹಾರದತ್ತ ಸಾಗಬೇಕು. ಡಿಜಿಟಲ್ ವ್ಯವಹಾರದಿಂದ ಆರ್ಥಿಕ ಪಾರದರ್ಶಕತೆಯನ್ನು ಕಂಡುಕೊಳ್ಳಲು ಸಾಧ್ಯವೆಂದು ಅಭಿಪ್ರಾಯಪಟ್ಟಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin