ಕಾರಿನೊಳಗೆ ಎಳೆದುಕೊಳ್ಳಲೆತ್ನಿಸಿದ ಕಾಮುಕರ ಕೈಯಿಂದ ಪಾರಾಗಿ ಬಂದ ಯುವತಿ

ಈ ಸುದ್ದಿಯನ್ನು ಶೇರ್ ಮಾಡಿ

Girl-Car

ಗುರುಗ್ರಾಮ (ಗುರ್ಗಾಂವ್), ಜ.11– ಒಂಟಿಯಾಗಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ತರುಣಿಯೊಬ್ಬಳನ್ನು ಹಿಡಿದೆಳೆದು ಕಾರಿನೊಳಕ್ಕೆ ಹಾಕಿಕೊಳ್ಳಲು ಯತ್ನಿಸಿದ ದುಷ್ಕರ್ಮಿಗಳಿಂದ ಬಿಡಿಸಿಕೊಂಡು ಆಕೆ ಕಾಮುಕರ ಕೈಯಿಂದ ಪಾರಾಗಿ ಬಂದಿರುವ ಘಟನೆ ಇಲ್ಲಿನ ಇಫ್ಕೋ ಚೌಕ್‍ನಲ್ಲಿ ನಿನ್ನೆ ರಾತ್ರಿ ನಡೆದಿದೆ.  ಇಲ್ಲಿನ ಐಟಿ ಕಂಪೆನಿಯೊಂದರಲ್ಲಿ ಕನ್ಸಲ್ಟೆಂಟ್ ಆಗಿರುವ ಜೈಪುರದ ತರುಣಿ ನಿನ್ನೆ ರಾತ್ರಿ ತನ್ನೂರಿನಿಂದ ವೋಲ್ವೊ ಬಸ್‍ನಲ್ಲಿ ಇಲ್ಲಿಗೆ ಬಂದಿದ್ದಾಳೆ. ಬಸ್ ಇಳಿದು ಕ್ಯಾಬ್ ಬುಕ್ ಮಾಡಲು ರಸ್ತೆಗೆ ಬಂದಿದ್ದಾಳೆ. ಆಗ ಆಕೆಯ ಪಕ್ಕಕ್ಕೆ ಸ್ಕಾರ್ಪಿಯೋವೊಂದು ಬಂದು ನಿಂತಿದೆ. ಕಾರಿನ ಹಿಂಭಾಗದ ಸೀಟ್‍ನಲ್ಲಿದ್ದವರು ಇವಳ ಕೈ ಹಿಡಿದು ವಾಹನದೊಳಕ್ಕೆ ಎಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ, ಆಕೆ ಅವರಿಂದ ಬಿಡಿಸಿಕೊಂಡು ಪಾರಾಗಿ ಬಂದಿದ್ದಾಳೆ.

ದುಷ್ಟರಿಂದ ಬಚಾವಾಗಿ ಬಂದ ತರುಣಿ ಇನ್ನೂ ಪೊಲೀಸರಿಗೆ ದೂರು ನೀಡಿಲ್ಲ. ತನ್ನ ಬಳಿ ಸೂಕ್ತ ಸಾಕ್ಷ್ಯಾಧಾರಗಳಿಲ್ಲದ್ದರಿಂದ ದೂರು ಕೊಡುವುದೋ ಬಿಡುವುದೋ ಎಂದು ಯೋಚಿಸುತ್ತಿದ್ದಾಳೆ.
ಆದರೆ, ಈ ಘಟನೆ ಬಗ್ಗೆ ಫೇಸ್‍ಬುಕ್‍ನಲ್ಲಿ ಪ್ರಚುರಪಡಿಸಿದ್ದು, ಬೇರೆ ಮಹಿಳೆಯರು ಇಂತಹ ದುಷ್ಕರ್ಮಿಗಳ ಬಗ್ಗೆ ಎಚ್ಚರಿಕೆಯಿಂದಿರುವಂತೆ ಮನವಿ ಮಾಡಿಕೊಂಡಿದ್ದಾಳೆ. ಕರ್ನಾಟಕದ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ನಡೆದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆಯೂ ತರುಣಿ ಪ್ರಸ್ತಾಪಿಸಿದ್ದು, ಯುವತಿಯರ ಮೇಲಿನ ಇಂತಹ ದೌರ್ಜನ್ಯಗಳು ದುರದೃಷ್ಟಕರ ಮತ್ತು ದೇಶಕ್ಕೆ ಮಾನಗೇಡು ಎಂದಿದ್ದಾಳೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin