ನದಿಯಲ್ಲಿ ಸ್ನಾನ ಮಾಡಲು ಹೋದ ಐವರು ನೀರುಪಾಲು

ಈ ಸುದ್ದಿಯನ್ನು ಶೇರ್ ಮಾಡಿ

Suicide-Water-02

ಬೆಳ್ತಂಗಡಿ. ಜ. 11 : ನದಿಯಲ್ಲಿ ಸ್ನಾನ ಮಾಡಲು ಹೋದ ಐವರು ನೀರುಪಾಲಾದ ಘಟನೆ ಗಡಾಯಿಕಲ್ ನಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಕಾಪು ಮೂಲದ ಇವರು ಪ್ರವಾಸಕ್ಕೆಂದು ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದರು. ಬೆಳ್ತಂಗಡಿಯ ನಡಾ ಸಮೀಪವಿರುವ ಗಡಾಯಿಕಲ್ ನದಿಗೆ ಸ್ನಾನ ಮಾಡಲು ಇಳಿದಾಗ ಆಕಸ್ಮಿಕವಾಗಿ ಇವರು ನೀರಿನಲ್ಲಿ ಜಲಸಮಾಧಿಯಾಗಿದ್ದಾರೆ.
ಹೊಳೆಯಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ಗ್ರಾಮಸ್ಥರು ರಕ್ಷಿಸಿದ್ದು ಉಳಿದವರನ್ನು ರಕ್ಷಿಸಲಾಗದೆ ಐವರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಥಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಉಡುಪಿ ಜಿಲ್ಲೆಯ ಕಾಪು ಪಕೀರನಕಟ್ಟೆಯ ರಹೀಮ್ (30), ಅವರ ಪತ್ನಿ ರುಬೀನಾ (25), ಯಾಸ್ಮಿನ್ (23) ಮತ್ತು ಸುಬಾನ್ (15) ಮೃತಪಟ್ಟವರು. ಇನ್ನೊಬ್ಬಾಕೆ ಮೈಮೂನಾ ಎಂಬವರು ನೀರಲ್ಲಿ ಮುಳುಗಿ ಅಸ್ವಸ್ಥಗೊಂಡಿದ್ದು, ಅವರನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

More updates awaiting…

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin