ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರ ಭರ್ಜರಿ ಬೇಟೆ : ಐವರು ಖದೀಮರ ಬಂದನ

ಈ ಸುದ್ದಿಯನ್ನು ಶೇರ್ ಮಾಡಿ

south-zone
ಬೆಂಗಳೂರು, ಜ.11- ನಗರದ ದಕ್ಷಿಣ ವಿಭಾಗದ ಪೊಲೀಸರು ಐದು ಮಂದಿ ಸರಗಳ್ಳರು ಹಾಗೂ ವಾಹನಗಳ್ಳನನ್ನು ಬಂಸಿ 16 ಲಕ್ಷ ರೂ. ಬೆಲೆಬಾಳುವ ಚಿನ್ನದ
ಸರಗಳು, ಚಿನ್ನದ ಗಟ್ಟಿ ಮತ್ತು ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕುಮಾರಸ್ವಾಮಿ ಲೇಔಟ್‍ನಲ್ಲಿ ಇಬ್ಬರು ಸರಗಳ್ಳರನ್ನು ಬಂಸಿ 11 ಲಕ್ಷ ರೂ. ಬೆಲೆಬಾಳುವ ಆಭರಣಗಳನ್ನು ವಶಪಡಿಸಿಕೊಂಡರೆ, ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಇಬ್ಬರು ಸರಗಳ್ಳರನ್ನು ಬಂಸಿ 2 ಲಕ್ಷ ರೂ. ಬೆಲೆಯ 50 ಗ್ರಾಂ ತೂಕದ ಎರಡು ಮಾಂಗಲ್ಯ ಸರಗಳು ಹಾಗೂ ಸಿಕೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯಲ್ಲಿ ಒಬ್ಬನನ್ನು ಬಂಸಿ 1.50 ಲಕ್ಷ ರೂ. ಬೆಲೆಯ ಸರ ಹಾಗೂ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕುಮಾರಸ್ವಾಮಿ ಲೇಔಟ್:

ನಗರದಲ್ಲಿ ಸರಗಳ್ಳತನ ನಡೆಸುತ್ತಿದ್ದ ಇಬ್ಬರನ್ನು ಕುಮಾರಸ್ವಾಮಿ ಲೇ ಔಟ್ ಪೊಲೀಸರು ಬಂಸಿ 12 ಲಕ್ಷ ರೂ. ಬೆಲೆ ಬಾಳುವ ಸರಗಳನ್ನು ವಶಪಡಿಸಿಕೊಂಡಿದ್ದಾರೆ.  ಬನಶಂಕರಿ ಎರಡನೆ ಹಂತದ ಕಾವೇರಿ ನಗರ ನಿವಾಸಿ ನಜೀರ್ (38) ಮತ್ತು ಗೌಡನ ಪಾಳ್ಯದ ಹರಿಬಾಬು (39) ಬಂತ ಸರಗಳ್ಳರಾಗಿದ್ದು, ಇವರಿಂದ 400 ಗ್ರಾಂ ತೂಕದ ಚಿನ್ನದ ಸರಗಳು ಮತ್ತು ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕುಮಾರಸ್ವಾಮಿ ಬಡಾವಣೆ ಪೊಲೀಸ್ ಠಾಣೆಯ ವಿಶೇಷ ಅಪರಾಧ ಪತ್ತೆ ದಳದ ಎಎಸ್‍ಐ ಪಾಂಡುರಂಗಯ್ಯ ಮತ್ತು ಸಿಬ್ಬಂದಿಯವರು ಸರಗಳ್ಳತನ ಮಾಡುವ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಈ ಇಬ್ಬರನ್ನು ಬಂಸುವಲ್ಲಿ ಯಶಸ್ವಿಯಾಗಿದ್ದಾರೆ.  ಆರೋಪಿಗಳ ಬಂಧನದಿಂದ 20 ಸರಗಳ್ಳತನಕ್ಕೆ ಯತ್ನ ಪ್ರಕರಣಗಳಲ್ಲಿ ಬಾಗಿಯಾಗಿರುವುದು ಬೆಳಕಿಗೆ ಬಂದಿದೆ. ವಸಂತಪುರ ಮುಖ್ಯ ರಸ್ತೆಯ ಸಿಟಿ ಎಂಜಿನಿಯರ್ ಕಾಲೇಜು ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಈ ಇಬ್ಬರನ್ನು ಗಸ್ತಿನಲ್ಲಿದ್ದ ಪೊಲೀಸರು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದಾಗ ಕುಮಾರಸ್ವಾಮಿ ಲೇ ಔಟ್, ಗಿರಿ ನಗರ, ಸುಬ್ರಹ್ಮಣ್ಯಪುರ, ಚನ್ನಮ್ಮನಕೆರೆ ಠಾಣೆ ವ್ಯಾಪ್ತಿಗಳಲ್ಲಿ ಸರಗಳ್ಳತನ ನಡೆಸಿರುವುದನ್ನು ಬಾಯ್ಬಿಟ್ಟಿದ್ದಾರೆ.

ಗಿರಿನಗರದ ಪ್ರಕರಣಕ್ಕೆ ಸಂಬಂಸಿದಂತೆ 40.72 ಗ್ರಾಂ ಚಿನ್ನದ ಗಟ್ಟಿ, ಸುಬ್ರಹ್ಮಣ್ಯ ಪುರ ವ್ಯಾಪ್ತಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಸಿದಂತೆ 57.450 ಗ್ರಾಂ ಮಾಂಗಲ್ಯ ಸರ, 43.50 ಗ್ರಾಂ ತೂಕದ ಚಿನ್ನದ ಗಟ್ಟಿ , 26.420 ಗ್ರಾಂ ಚಿನ್ನದ ಗಟ್ಟಿ, 45.900 ಗ್ರಾಂ ತೂಕದ ಎರಡೆಳೆ ಮಾಂಗಲ್ಯ ಸರ, 51.500 ಗ್ರಾಂ ಚಿನ್ನದ ಗಟ್ಟಿ ಮತ್ತು ಚನ್ನಮ್ಮನ ಕೆರೆ ಅಚ್ಚುಕಟ್ಟು ವ್ಯಾಪ್ತಿಯ ಪ್ರಕರಣಕ್ಕೆ ಸಂಬಂಸಿದಂತೆ 52 ಗ್ರಾಂನ 3 ಸರಗಳು, 2 ತಾಳಿ, 4 ಗುಂಡುಗಳು , 31.500 ಗ್ರಾಂ ಚಿನ್ನದ ಸರ ಮತ್ತು ಕೆ.ಎಸ್.ಲೇಔಟ್‍ನಲ್ಲಿ ನಡೆದ ಪ್ರಕರಣಕ್ಕೆ ಸಂಬಂಸಿದಂತೆ 33 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಉತ್ತಮ ಕಾರ್ಯವನ್ನು ಹಿರಿಯಪೊಲೀಸ್ ಅಕಾರಿಗಳು ಪ್ರಶಂಸಿಸಿದ್ದಾರೆ.

ಸುಬ್ರಹ್ಮಣ್ಯಪುರ:

ಕೊಲ್ಕತ್ತಾದಿಂದ ನಗರಕ್ಕೆ ಬಂದು ದ್ವಿಚಕ್ರ ವಾಹನಗಳ ರಿಪೇರಿ ಮಾಡುವ ಕೆಲಸಕ್ಕೆ ಸೇರಿ ಮಹಿಳೆಯರ ಸರಗಳನ್ನು ಅಪಹರಿಸುತ್ತಿದ್ದ ಇಬ್ಬರು ಸರಗಳ್ಳರನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಸಿಬ್ಬಂದಿಗಳು ಬಂಸುವಲ್ಲಿ ಯಶಸ್ವಿಯಾಗಿದ್ದಾರೆ.  ಕೊಲ್ಕತ್ತಾ ಮೂಲದ ಅಲಮೀನ್ ಶೇಖ್ (26) ಮತ್ತು ಜಹಂಗೀರ್ (20) ಬಂತ ಸರಗಳ್ಳರಾಗಿದ್ದು, ಸುಬ್ರಹ್ಮಣ್ಯಪುರ ಠಾಣೆಯ ಎರಡು ಸರಗಳ್ಳತನ ಪ್ರಕರಣಗಳಿಗೆ ಸಂಬಂಧಪಟ್ಟ 50 ಗ್ರಾಂ ತೂಕದ 2 ಲಕ್ಷ ರೂ. ಮೌಲ್ಯದ ಎರಡು ಮಾಂಗಲ್ಯ ಸರಗಳನ್ನು ವಶಪಡಿಸಿಕೊಂಡಿದ್ದಾರೆ.  ಇವರಿಬ್ಬರು ದ್ವಿಚಕ್ರ ವಾಹನಗಳ ರಿಪೇರಿ ಮಾಡುವ ಕೆಲಸ ಮಾಡಿಕೊಂಡು ಅಲ್ಲಿಯೇ ವಾಸವಿದ್ದುಕೊಂಡು ಅವರ ಬಳಿ ಇದ್ದ ಮೋಟಾರ್ ಬೈಕ್‍ನಲ್ಲಿ ಸುತ್ತಾಡುತ್ತಾ ಒಂಟಿಯಾಗಿ ಹೋಗುವ ಮಹಿಳೆಯರನ್ನು ಹಿಂಬಾಲಿಸಿ ಮಾಂಗಲ್ಯ ಸರಗಳನ್ನು ಅಪಹರಿಸುತ್ತಿದ್ದರು.

ನಗರದಲ್ಲಿ ಒಂದಲ್ಲ ಒಂದು ಕಡೆ ಸರಗಳ್ಳತನ ನಡೆಯುತ್ತಿದ್ದುದನ್ನು ಸವಾಲಾಗಿ ಸ್ವೀಕರಿಸಿದ್ದ ಚೀತಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಸುಬ್ರಹ್ಮಣ್ಯಪುರ ವ್ಯಾಪ್ತಿಯ ಕೊತ್ತನೂರು ರಸ್ತೆಯ ಗೌರವ ನಗರದ ರಸ್ತೆಯಲ್ಲಿ ಗಸ್ತಿನಲ್ಲಿದ್ದಾಗ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಈ ಇಬ್ಬರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಸರಗಳ್ಳತನ ನಡೆಸುತ್ತಿದ್ದುದನ್ನು ಬಾಯ್ಬಿಟ್ಟಿದ್ದಾರೆ. ದಕ್ಷಿಣ ವಿಭಾಗದ ಉಪ ಪೊಲೀಸ್ ಕಮೀಷನರ್ ಡಾ.ಎಸ್.ಡಿ.ಶರಣಪ್ಪ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಸಲಾಗಿದೆ.

ಸಿಕೆ ಅಚ್ಚುಕಟ್ಟು:

ವಿಳಾಸ ಕೇಳುವ ನೆಪದಲ್ಲಿ ಚಾಕು ತೋರಿಸಿ ಬೆದರಿಸಿ ಮನೆ ಮುಂದೆ ಕುಳಿತಿದ್ದ ಮಹಿಳೆಯ ಸರ ಎಗರಿಸಿ ಪರಾರಿಯಾಗಿದ್ದ ಸರಗಳ್ಳನನ್ನು ಸಿಕೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಸಿ 1.50 ಲಕ್ಷ ರೂ. ಬೆಲೆಬಾಳುವ 20 ಗ್ರಾಂ ತೂಕದ ಚಿನ್ನದ ಸರ ಮತ್ತು 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿ ದ್ದಾರೆ.  ಬನಶಂಕರಿ 3ನೆ ಹಂತದ ಶಶಿಕುಮಾರ್ (19) ಬಂತ ಆರೋಪಿಯಾಗಿದ್ದು, ಈತ ಡಿ.2ರಂದು ಸಂಜೆ 5 ಗಂಟೆ ಸಮಯದಲ್ಲಿ ಮನೆ ಮುಂದೆ ಕುಳಿತಿದ್ದ ಪದ್ಮಾ ಎಂಬುವರ ಬಳಿ ಪಲ್ಸರ್ ಬೈಕ್‍ನಲ್ಲಿ ಈತ ವಿಳಾಸ ಕೇಳುವ ನೆಪದಲ್ಲಿ ಬಂದು ಚಾಕುವಿನಿಂದ ಬೆದರಿಸಿ ಅವರ ಕೊರಳಲ್ಲಿದ್ದ 20 ಗ್ರಾಂ ತೂಕದ ಅರ್ಧ ಸರ ಎಳೆದುಕೊಂಡು ಪರಾರಿಯಾಗಿದ್ದನು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ಪತ್ತೆಗಾಗಿ ದಕ್ಷಿಣ ವಿಭಾಗದ ಉಪ ಪೊಲೀಸ್ ಕಮಿಷನರ್ ಡಾ.ಎಸ್.ಡಿ.ಶರಣಪ್ಪ ಮಾರ್ಗದರ್ಶನದಲ್ಲಿ ಎಸಿಪಿ ಮಂಜುನಾಥ ಚೌಧರಿ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಸದಾಶಿವಯ್ಯ ಮತ್ತು ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.  ಈ ತಂಡ ಹಗಲಿರುಳೆನ್ನದೆ ಕಾರ್ಯಾಚರಣೆ ನಡೆಸಿ ಮಾಹಿತಿ ಕಲೆ ಹಾಕಿ ಆರೋಪಿಯನ್ನು ಬಂಸುವಲ್ಲಿ ಯಶಸ್ವಿಯಾಗಿದೆ.  ಈತ ತನ್ನ ಸಹಚರರೊಂದಿಗೆ ಸೇರಿಕೊಂಡು ದ್ವಿಚಕ್ರ ವಾಹನಗಳಲ್ಲಿ ಸುತ್ತಾಡುತ್ತ ಒಂಟಿ ಮಹಿಳೆಯರನ್ನು ಹಿಂಬಾಲಿಸಿ ಸರಗಳ್ಳತನ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin