ಹಾಲಿ ಶಾಸಕರಿಗೆ ಮಾಜಿ ಶಾಸಕ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

7

ಹುನಗುಂದ,ಜ.11- ಕೊಟ್ಟ ಕುದುರೆಯನ್ನು ಏರಲಾರದವ ಶೂರನು ಅಲ್ಲ ಧೀರನು ಅಲ್ಲ ಎಂದು ಮಾತನಾಡಿದ ಶಾಸಕ ವಿಜಯಾನಂದ ಕಾಶಪ್ಪನವರ ಎ.ಪಿ.ಎಮ್.ಸಿ ಚುನಾವಣೆ ಸಂದರ್ಭದ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ 2004ರ ಚುನಾವಣೆಯಲ್ಲಿ ಅಪರಚಿತನಾದ ನನ್ನನು ವಿಶ್ವಾಸ ಅಭಿಮಾನವಿಟ್ಟು ಕ್ಷೇತ್ರದ ಮತದಾರರು ಆಯ್ಕೆ ಮಾಡಿದ್ದಾರೆ. ಇದು ಹುನಗುಂದ ತಾಲೂಕಿನ ಜನತೆ ನೀಡಿದ ಕುದುರೆ. ಜನರು ಕೊಟ್ಟ ಕುದರೆಯಿಂದ ತಾಲೂಕಿನಲ್ಲಿ ಮರೊಳ ಏತ ನೀರಾವರಿ ಹಾಗೂ ಹನಿ ನೀರಾವರಿಯಿಂದ ಹಸಿರು ಕ್ರಾಂತಿ ಮಾಡಿದ್ದೇನೆ ಎಂದರು.

ನಗರದ ವಿ.ಮ. ವೃತ್ತದಲ್ಲಿ ಬಿಜೆಪಿ ಬೆಂಬಲಿತ ರೈತ ಕ್ಷೇತ್ರದ ಅಭ್ಯರ್ಥಿ ಬಸನಗೌಡ ಪೈಲ ಅವರ ಚುನಾವಣೆಯ ಬಹಿರಂಗ ಪ್ರಚಾರ ಸಭೈಯಲ್ಲಿ ಅವರು ಮಾತನಾಡುತ್ತ, ನನ್ನ ಸ್ವಂತ ಗ್ರಾಮ ಲೆಕ್ಕಿಹಾಳದಲ್ಲಿ ನಂದವಾಡಗಿ ಏತ ನೀರಾವರಿ ಯೊಜನೆಯಿಂದ ಒಂದು ಕೆನಾಲ ಅಥವಾ ಒಂದಿಂಚು ನೀರಾವರಿಯಗಿದ್ದನ್ನು ಸಾಬಿತುಪಡಿಸಿದರೆ ನಾನು ಜನ ಹೇಳಿದಂತೆ ಕೇಳುತ್ತೇನೆ. ರಾಜಕೀಯ ನಿವೃತ್ತಿ ಪಡೆಯುವೆ. ಪದೇ ಪದೇ ತಾಲೂಕಿನ ಜನತೆಗೆ ಮೋಸ ಮಾಡಿದ್ದೇನೆ ಎಂದು ಆರೋಪಿಸುವ ಶಾಸಕ ವಿಜಯಾನಂದ ಕಾಶಪ್ಪನವರ ಜಮೀನುಗಳು ನೀರಾವರಿಯಾಗಿದ್ದು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ ಅವಧಿಯಲ್ಲಿ ಎಂದು ಸವಾಲೆಸೆದರು.

ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಸುಬಾಶ ತಾಳಿಕೋಟಿ ಮಾತನಾಡಿ ವಿಶ್ವ ಮೆಚ್ಚಿದ ನಾಯಕ ಪ್ರಧಾನಿ ನರೆಂದ್ರ ಮೋದಿ ನೋಟ್ ಬ್ಯಾನ ಮುಖಾಂತರ ಹಣಕಾಸಿನ ವ್ಯವಸ್ಥೆಯಲ್ಲಿ ಪಾರದರ್ಶಕತೆಯೀಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ ಕ್ರಮವನ್ನು ಪ್ರಶ್ನಿಸುವ ಹಕ್ಕು ಕಾಂ ಗ್ರೆಸಿಗರಿಗಿಲ್ಲ. ಕಪ್ಪು ಧನಿಕರು ತೆರಿಗೆ ಕಳ್ಳರು ನಿದ್ದೆಗಿಡಾಗಿದ್ದಾರೆ. ಈ ಚುಣಾವಣೆ ಸಂದರ್ಭದಲ್ಲಿ ಪ್ರಚಾರ ಸಭೈಗಳಿಗೆ ಆಡಳಿತ ಪಕ್ಷಕ್ಕೊಂದೂ, ವೀರೋಧ ಪಕ್ಷಗಳಿಗೊಂದು ನಿಯಮಗಳ ಮೀನಾಮೇಶ ಮಾಡುವ ತಾಲೂಕಾಡಳಿತ ಹಾಗೂ ಪೊಲೀಸ್ ಇಲಾಖೆ ತೊರುತ್ತಿರುವ ಧೋರಣೆಯನ್ನು ಖಂಡಿಸಿದರು.

ಜಿಲ್ಲಾ ಪಂಚಾಯತ ಸದಸ್ಯ ಶಶಿಕಾಂತ ಪಾಟೀಲ ಮಾತನಾಡಿ ತಾಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ,ರಾಜಾರೋಶವಾಗಿ ನಡೆಯುತ್ತಿದೆ. ತಾಲೂಕಾ ಆಡಳಿತ ಸಂಪೂರ್ಣ ವಿಫಲವಾಗಿದೆ. ಬಿಜೆಪಿಯಲ್ಲಿ ಯಾವದೇ ಬಿನ್ನಾಬಿಪ್ರಾಯ ಗುಂಪುಗಾರಿಕೆ ಇಲ್ಲ ಹಾಗೂ ಸಂಗೋಳ್ಳಿ ರಾಯಣ್ಣಾ ಬ್ರಿಗೇಡನಿಂದ ಪಕ್ಷಕ್ಕೆ ಬೆಂಬಲವಿದೆ ಎಂದು ಮಾತನಾಡಿದರು. ಪ್ರಚಾರ ಸಭೈಯಲ್ಲಿ ರವಿ ಹುಚನೂರ, ಮಹಾಂತೆಶ ಅಂಗಡಿ, ಗುರಣ್ಣ ಗೋಡಿ, ಬಸಪ್ಪ ಆಲೂರ ಮಾತನಾಡಿದರು. ಮಹಾಂತೇಶ ರೆವಡಿ, ಎ.ಆರ್. ನಿಂಬಲಗುಂದಿ, ಅಜ್ಜಪ್ಪ ನಾಡಗೌಡ, ಮಹೇಶ ಬೆಳ್ಳಿಹಾಳ, ಶೇಖರ ಬಡಿಗೇರ ಇತರರು ಇದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin