“Excuse me, Please Kiss me” ಎಂದು ಜೈಲು ಸೇರಿದ..!

ಈ ಸುದ್ದಿಯನ್ನು ಶೇರ್ ಮಾಡಿ

Kiss-Me

ಬೆಂಗಳೂರು,ಜ.11-ಕಂಡ ಕಂಡ ಹೆಣ್ಣುಮಕ್ಕಳನ್ನು ಅಡ್ಡಗಟ್ಟಿ ಎಕ್ಸ್‍ಕ್ಯೂಸ್‍ಮಿ ಕಿಸ್ ಮಿ ಪ್ಲೀಸ್, ಹಗ್ ಮಿ ಪ್ಲೀಸ್ ಎಂದು ಸತಾಯಿಸುತ್ತಿದ್ದ ಸ್ತ್ರೀ ಕಂಟಕ ಮಣಿಕಂಠ(20) ಎಂಬಾತನನ್ನು ಬಂಧಿಸುವಲ್ಲಿ ವೈಯಾಲಿಕಾವಲ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.   ಇಬ್ಬರು ಶಾಲಾ ಬಾಲಕಿಯರು ಹಾಗೂ ಓರ್ವ ಮಹಿಳೆಗೆ ಜನನಿಬಿಡ ಪ್ರದೇಶದಲ್ಲಿ ಈ ರೀತಿ ಲೈಂಗಿಕ ಕಿರುಕುಳ ನೀಡಿದ ಮಣಿಕಂಠನನ್ನು ಮೂರು ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರ ಕಾರ್ಯಾಚರಣೆ ಸಾರ್ವಜನಿಕರ ಶಹಬ್ಬಾಸ್‍ಗಿರಿ ಗಿಟ್ಟಿಸಿಕೊಂಡಿದೆ.  ಪಿಯುಸಿ ವ್ಯಾಸಂಗ ಮಾಡಿರುವ ಮಣಿಕಂಠ ಮುನೇಶ್ವರ ಬ್ಲಾಕ್ ನಿವಾಸಿಯಾಗಿದ್ದು , ಹೊಟ್ಟೆಪಾಡಿಗಾಗಿ ಗಾರೆ ಕೆಲಸ ಮಾಡಿಕೊಂಡಿದ್ದ. ಈತನಿಗೆ ಗಾಂಜಾ ಚಟ ಸಹ ಇತ್ತು.

ನಿನ್ನೆ ಮಧ್ಯಾಹ್ನ 1.30ರ ಸಮಯದಲ್ಲಿ ಠಾಣಾ ವ್ಯಾಪ್ತಿಯ ಸ್ವಿಮಿಂಗ್‍ಫೂಲ್ ಬಡಾವಣೆಯಲ್ಲಿ ನಡೆದು ಹೋಗುತ್ತಿದ್ದ 20 ವರ್ಷದ ಮಹಿಳೆಯನ್ನು ಅಡ್ಡಗಟ್ಟಿ ಎಕ್ಸ್‍ಕ್ಯೂಸ್‍ಮಿ ನನ್ನನ್ನು ಒಂದು ಬಾರಿ ಅಪ್ಪಿಕೊಳ್ಳಿ ಹಾಗೆ ಒಂದು ಮುತ್ತು ನೀಡಿ ಎಂದು ಒತ್ತಾಯಿಸಿದ್ದ.  ಸಂಜೆ 4.30ರ ಸಮಯದಲ್ಲಿ ವೈಯಾಲಿಕಾವಲ್‍ನ 5ನೇ ಮುಖ್ಯರಸ್ತೆಯಲ್ಲಿ ಶಾಲೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಇಬ್ಬರು ಶಾಲಾ ಬಾಲಕಿಯರನ್ನು ಎಕ್ಸ್‍ಕ್ಯೂಸ್‍ಮಿ ಎಂದು ಕರೆದು ಕೆನ್ನೆಗೆ ಒಂದು ಮುತ್ತು ಕೊಡುವಂತೆ ಹಾಗೂ ತಬ್ಬಿಕೊಳ್ಳುವಂತೆ ಒತ್ತಾಯಿಸಿದ್ದ.

ಈ ರೋಡ್ ರೋಮಿಯೊ ವರ್ತನೆ ವಿರುದ್ಧ ದಾಖಲಾದ ದೂರನ್ನಾಧರಿಸಿ ಕಾರ್ಯಾಚರಣೆಗಿಳಿದ ವೈಯಾಲಿಕಾವಲ್ ಪೊಲೀಸರು ಘಟನೆ ನಡೆದ ಮೂರು ಗಂಟೆಯೊಳಗೆ ಮಣಿಕಂಠನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕೇಂದ್ರ ವಿಭಾಗದ ಡಿಸಿಪಿ ಡಾ.ಚಂದ್ರಗುಪ್ತ ಅವರು ಈ ಸಂಜೆಗೆ ತಿಳಿಸಿದ್ದಾರೆ.   ಹೊಸ ವರ್ಷ ಆರಂಭದ ದಿನದಿಂದಲೂ ನಗರದಲ್ಲಿ ಒಂದಿಲ್ಲೊಂದು ಲೈಂಗಿಕ ಕಿರುಕುಳ ಪ್ರಕರಣಗಳು ನಡೆಯುತ್ತಿರುವುದು ಸಾರ್ವಜನಿಕರ ನಿದ್ದೆಗೆಡಿಸಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin