ಪ್ರಧಾನಿ ಮೋದಿ ಅವರಿಗೆ ಎದುರಾಗಿರುವ ಕಂಟಕ ನಿವಾರಣೆಗೆ ನವದುರ್ಗ ಹೋಮ

ಈ ಸುದ್ದಿಯನ್ನು ಶೇರ್ ಮಾಡಿ

Homa-Modi

ಬೆಂಗಳೂರು, ಜ.12- ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎದುರಾಗಿರುವ ಕಂಟಕ ನಿವಾರಣೆಯಾಗಲಿ ಎಂದು ಪ್ರಾರ್ಥಿಸಿ ಮೋದಿ ಅಭಿಮಾನಿಗಳು ಎಚ್‍ಎಸ್‍ಆರ್ ಲೇಔಟ್‍ನ ಬಿಡಿಎ ಕಾಂಪ್ಲೆಕ್ಸ್‍ನಲ್ಲಿ ನವದುರ್ಗ ಹೋಮ ನೆರವೇರಿಸಿದರು. ನರೇಂದ್ರ ಮೋದಿ ಅವರ ಅಭಿಮಾನಿ ನಾಗೇಶ್ ಹಾಗೂ ಸಂಗಡಿಗರು ವೇದಪಂಡಿತರ ಮೂಲಕ ನವದುರ್ಗ ಹೋಮ ನೆರವೇರಿಸಿ ನರೇಂದ್ರ ಮೋದಿ ಅವರಿಗೆ ಎದುರಾಗಿರುವ ಕಂಟಕ ಗಳನ್ನು ನಿವಾರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು. ಸರ್ಜಿಕಲ್ ಸ್ಟ್ರೈಕ್, ನೋಟು ಅಮಾನ್ಯದಿಂದ ಮೋದಿ ಅವರಿಗೆ ಎದುರಾಗಿರುವ ವಿಘ್ನಗಳನ್ನು ಹೋಗಲಾಡಿಸಲು ಈ ಹೋಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin