ಬಂತು ಬಂತು ಸುಗ್ಗಿ ಹಬ್ಬ ಸಂಕ್ರಾಂತಿ : ಬೆಲೆ ಏರಿಕೆ ನಡುವೆಯೂ ನಿಲ್ಲದ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

Sankrandhi
ಬೆಂಗಳೂರು, ಜ.12– ಇನ್ನೇನು ನಾಳೆ ಕಳೆದರೆ ಸಂಕ್ರಾಂತಿ ಸಂಭ್ರಮ. ಹಬ್ಬಕ್ಕಾಗಿ ಮಹಿಳೆ ಯರು ಎಳ್ಳು-ಬೆಲ್ಲ , ಕಬ್ಬು , ಅವರೆಕಾಯಿ, ಕಡಲೆಕಾಯಿ ಖರೀದಿಯ ಭರಾಟೆಯಲ್ಲಿ ತೊಡಗಿದ್ದಾರೆ. ಇಂದು ಬೆಳಗ್ಗೆಯಿಂದಲೇ ಮಹಿಳೆಯರು ಹೂವು ಸೇರಿದಂತೆ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿರುವುದು ಕಂಡುಬಂತು. ಸಂಕ್ರಾಂತಿ ಹಬ್ಬವನ್ನು ನಗರದಲ್ಲಿ ಅದರಲ್ಲೂ ಹಳ್ಳಿಗಳಲ್ಲಿ ಸಡಗರ ಸಂಭ್ರಮದಿಂದ ಆಚರಿಸ ಲಾಗುತ್ತದೆ. ಎಳ್ಳು-ಬೆಲ್ಲ, ಸಕ್ಕರೆ ಅಚ್ಚು ಮನೆಮನೆಗೆ ನೀಡುವುದು ಹಬ್ಬದ ವಿಶೇಷತೆಯಾಗಿದೆ.   ಕಬ್ಬು, ಗೆಣಸು, ಅವರೆಕಾಯಿ, ಕಡಲೆಕಾಯಿ, ಎಳ್ಳು-ಬೆಲ್ಲ ಹಾಗೂ ಹೂವಿನ ಬೆಲೆ ಗಗನಕ್ಕೇರಿದೆ. ಆದ್ರೂ ಹಿರಿ ಯರು ಪಾಲಿಸಿಕೊಂಡು ಬಂದ ಸಂಪ್ರದಾಯವನ್ನು ಮುಂದು ವರೆಸಿಕೊಂಡು ಹೊಗ್ಬೇಕ್ಕಲ್ಲ.

ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ಇನ್ನೊಂದು ದಿನ ಬಾಕಿ ಇದ್ದು, ಈಗಾಗಲೇ ಮಾರುಕಟ್ಟೆಗೆ ಕಬ್ಬು, ಅವರೆಕಾಯಿ, ಗೆಣಸು, ಕಡಲೆಕಾಯಿ ಬಂದಿದ್ದು, ವ್ಯಾಪಾರ ಬಿರುಸಿನಿಂದಲೇ ನಡೆಯುತ್ತಿದೆ. ಸಂಕ್ರಾಂತಿ ಹಬ್ಬದ ದಿನ ಅವರೆಕಾಯಿ, ಕಡಲೆ ಕಾಯಿ ಹಾಗೂ ಗೆಣಸು ಬಳಕೆ ಮಾಡುವುದು ಸಂಪ್ರದಾಯ. ಆದರೆ, ಬೆಲೆ ಏರಿಕೆಯಾಗಿರುವುದು ಜನಸಾಮಾನ್ಯರಿಗೆ ತುಸು ಹೊರೆಯಾಗಿದೆ. ಅವರೆ ಕಾಯಿಯ ಸೀಸನ್ ಬಂತೆಂದರೆ ಎಲ್ಲಿ ನೋಡಿದರೂ ಹಸಿರು ಅವರೆಯ ಸೊಗಡಿನ ವಾಸನೆ ಸೂಸುತ್ತದೆ. ಆದರೆ, ಈ ಬಾರಿ ಮಳೆ ಕೊರತೆ ಹಾಗೂ ಹೆಚ್ಚು ಮಂಜು ಕವಿದಿದ್ದರಿಂದ ಅವರೆ ಮತ್ತು ಕಡಲೆಕಾಯಿ ಉತ್ಪಾದನೆಯಲ್ಲಿ ಭಾರೀ ಕುಸಿತ ಕಂಡಿದೆ. ಮಾಗಡಿ ಅವರೆಕಾಯಿ ಎಂದರೆ ಹೆಸರುವಾಸಿ. ತುಮಕೂರು, ಚಿಕ್ಕಬಳ್ಳಾಪುರ, ಕೋಲಾರದಿಂದ ಲೋಡುಗಟ್ಟಲೆ ಅವರೆಕಾಯಿ ಬೆಂಗಳೂರಿನ ಮಾರುಕಟ್ಟೆಗೆ ಬರುತ್ತಿತ್ತು. ಆದರೆ, ಈ ಬಾರಿ ಬರದ ಪ್ರಭಾವದಿಂದ ಎಲ್ಲಿಯೂ ಅಂತಹ ಅವರೆಕಾಯಿ ರಾಶಿ ಕಾಣಲಿಲ್ಲ.

Sankranthi

ಈ ಬಾರಿ ಮೂಟೆ ಲೆಕ್ಕದಲ್ಲಿ ಬಂದಿದ್ದು, ಇದರ ಪರಿಣಾಮ ದಿಂದ ಬೆಲೆ ಏರಿಕೆಯಾಗಿದೆ. ಕೆಜಿಗೆ 70ರಿಂದ 80ರೂ. ಇದ್ದು, ಇನ್ನು ಗೆಣಸು 30ರಿಂದ 40ರೂ. ಬೆಲೆ ಇದೆ. ಒಂದು ಜತೆ ಕಬ್ಬಿಗೆ 50ರಿಂದ 100 ಇದ್ದು, ಇನ್ನು ಎಳ್ಳು-ಬೆಲ್ಲ ಮಿಶ್ರಣ ಕೆಜಿಗೆ 300ರಿಂದ 400ರೂ.ಗೆ ಏರಿಕೆಯಾಗಿದೆ. ಇದರ ಜತೆಗೆ ಹೂವಿನ ಬೆಲೆಯೂ ಗಗನಕ್ಕೇರಿದೆ. ಈ ಬಿಸಿ ಗ್ರಾಮೀಣ ಭಾಗಕ್ಕೂ ತಟ್ಟಿದ್ದು, ವ್ಯಾಪಕ ಬರಗಾಲದಿಂದ ಗ್ರಾಮೀಣರಲ್ಲಿ ಸುಗ್ಗಿಸಂಭ್ರಮ ಕ್ಷೀಣಿಸಿದೆ. ಬಿತ್ತಿದ ಬೆಳೆ ಕೈಗೆ ಬಾರದೆ ಅನ್ನದಾತ ಕಂಗಾಲಾಗಿದ್ದು, ಇದರ ನಡುವೆ ಹೇಗೆ ಸಂಭ್ರಮದಿಂದ ಹಬ್ಬ ಮಾಡುವುದು ಎಂಬ ಚಿಂತೆಯಲ್ಲಿದ್ದಾರೆ. ಬೆಳೆದ ದವಸ-ಧಾನ್ಯಗಳನ್ನು ಸಂಕ್ರಾಂತಿಯಂದು ಪೂಜೆ ಮಾಡಿ ಕಣದಿಂದ ಮನೆಗೆ ತರುವುದು ಸಂಪ್ರದಾಯ. ಅದೇನೇ ಇದ್ದರೂ ನಮ್ಮ ಭಾರತೀಯ ಸಂಸ್ಕøತಿ ಹಾಗೂ ಹಿರಿಯರು ನಡೆಸಿಕೊಂಡ ಆಚಾರ-ವಿಚಾರಗಳನ್ನು ಮುಂದುವರೆಸಿಕೊಂಡು ಹೋಗ ಬೇಕಲ್ಲ. ಕಷ್ಟನೋ-ಸುಖಾನೋ ಹಬ್ಬ ಆಚರಿಸಲೇಬೇಕಾಗಿದೆ.

Sankranthi-3

ಸುಗ್ಗಿ ಹಿಗ್ಗಿನ ಸಂಕೇತ ಮಕರ ಸಂಕ್ರಾಂತಿ:

ಜನವರಿ 14ರಂದು ನಡೆಯುವ ಮಕರ ಸಂಕ್ರಾಂತಿಯಂದೇ ಉತ್ತರಾಯಣದ ಆಚರಣೆಯೂ ನಡೆಯುತ್ತದೆ. ಜನವರಿ 14ರಂದು ಭೋಗಿ ಹಬ್ಬ ಆಚರಿಸಿದರೆ, 15ರಂದು ಮಕರ ಸಂಕ್ರಾಂತಿ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಗೆ ಪ್ರತಿಯೊಂದು ಪ್ರದೇಶದಲ್ಲಿ ಅದರದೇ ಆದ ಹೆಸರುಗಳಿವೆ.  ಸೂರ್ಯನು ಕರ್ಕಾಟಕ ರಾಶಿ ಯಿಂದ ಮಕರ ರಾಶಿಗೆ ಪ್ರವೇಶಿ ಸುವ ದಿನವೇ ಮಕರ ಸಂಕ್ರಾಂತಿ. ಭೋಗಿ ಹಬ್ಬಕ್ಕೆ ಋತು ರಾಜ ಇಂದ್ರನಿಗೆ ಪೂಜಿಸಿದರೇ, ಮಕರ ಸಂಕ್ರಾಂತಿಗೆ ಸೂರ್ಯನಿಗೆ ಪೂಜಿಸಲಾಗುತ್ತದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin