ಮೈಸೂರಲ್ಲಿ ಗುಂಡು ಹಾರಿಸಿಕೊಂಡು ಮಾಜಿ ಯೋಧನ ಪುತ್ರ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Firing-Suicide

ಮೈಸೂರು, ಜ.12– ಗುಂಡು ಹಾರಿಸಿಕೊಂಡು ವಿದ್ಯರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಬೆಳಗ್ಗೆ ರಾಘವೇಂದ್ರ ನಗರದಲ್ಲಿ ನಡೆದಿದೆ. ಎನ್‍ಐಇ ಕಾಲೇಜಿನಲ್ಲಿ ಐಟಿಐ ವ್ಯಾಸಂಗ ಮಾಡುತ್ತಿದ್ದ ಭುವನ್ (19) ಆತ್ಮಹತ್ಯೆ ಮಾಡಿಕೊಂಡ ಯುವಕ.  ಮಾಜಿ ಯೋಧನ ಪುತ್ರನಾದ ಭುವನ್ ಇಂದು ಬೆಳಗ್ಗೆ ಮನೆಯಿಂದ ಗನ್ ತೆಗೆದುಕೊಂಡು ಬಂದು ಕಾಲೇಜು ಬಳಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಆದರೂ ಈತ ಬಳಸಿದ್ದ ಗನ್ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಗನ್ ಪರವಾನಗಿ ಹೊಂದಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ತನಿಖೆ ಆರಂಭಗೊಂಡಿದೆ.

ಕಾಲೇಜಿಗೆ ಬರುವಾಗ ಈ ಘಟನೆ ನಡೆದಿರುವುದು ಸಹಪಾಠಿಗಳಿಗೆ ಆಘಾತ ತಂದಿದೆ ಮತ್ತು ಇತರೆ ವಿದ್ಯಾರ್ಥಿಗಳು ಬೆಚ್ಚಿಬಿದ್ದಿದ್ದಾರೆ. ನಜರ್‍ಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin