ರಜೆ ವಿಚಾರವಾಗಿ ನಾಲ್ವರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ ಸಿಐಎಸ್‌ಎಫ್ ಯೋಧ

ಈ ಸುದ್ದಿಯನ್ನು ಶೇರ್ ಮಾಡಿ
The site where a CISF constable opened fire and killed his colleagues in Aurangabad district of Bihar on Thursady.
The site where a CISF constable opened fire and killed his colleagues in Aurangabad district of Bihar on Thursady.

ಪಾಟ್ನಾ ಜ.12 : ರಜೆಯ ವಿಚಾರವಾಗಿ ಹಿರಿಯ ಅಧಿಕಾರಿಗಳ ವಿರುದ್ದ ಅಸಮಾಧಾನಗೊಂಡು ಆವೇಶಕ್ಕೊಳಗಾಗಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ(ಸಿಐಎಸ್‌ಎಫ್) ಯೋಧ ತನ್ನ ನಾಲ್ಕು ಮಂದಿ ಸಹೋದ್ಯೋಗಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿರುವ ನಬೀನಗರ್ ಉಷ್ಣ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಸಂಭವಿಸಿದೆ. ಆರೋಪಿ ಯೋಧನನ್ನು ಬಲ್ವೀರ್ ಸಿಂಗ್ ಎಂದು ಗುರುತಿಸಿದ್ದು, ತನ್ನ ರಜೆಗೆ ಸಂಬಂಧಿಸಿದ ವಿಚಾರದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಯೋಧ ಅಸಮಾಧಾನ ಹೊಂದಿದ್ದ ಎಂದು ತಿಳಿದು ಬಂದಿದೆ. ಮದ್ಯಾಹ್ನ 12.30 ರ ವೇಳೆಗೆ ಸಂಭವಿಸಿರುವ ಈ ದುರಂತದಲ್ಲಿ ಮೂವರು ಕಾನ್ಸ್ಟೆಬಲ್ ಗಳು ಹಾಗೂ ಓರ್ವ ಸಹಾಯಕ ಸಬ್ ಇನ್ಸೆಕ್ಟರ್ ಸಾವಿಗೀಡಾಗಿದ್ದಾರೆ. ಈಗಾಗಲೇ ಆರೋಪಿ ಯೋಧನನ್ನು ಬಂಧಿಸಲಾಲಾಗಿದ್ದು ವಿಚಾರಣೆ ಮುಂದುವರೆದಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin