ಹುಡುಗಾಟದಲ್ಲಿ ಹೋಯ್ತು ಹುಡುಗಿ ಪ್ರಾಣ, ನಿಜವಾಯ್ತು ನೇಣಿನ ನಾಟಕ..!
ಬೆಂಗಳೂರು, ಜ.12- ಪೋಷಕರನ್ನು ಭಯ ಬೀಳಿಸುವ ಸಲುವಾಗಿ ಹುಡುಗಾಟವಾಡಲು ಹೋದ ಯುವತಿ ನೇಣಿನ ಕುಣಿಕೆಯಲ್ಲೇ ಸಾವನ್ನಪ್ಪಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಾಪೂಜಿನಗರದ ನಿವಾಸಿ ರಮೇಶ್ ಎಂಬುವರ ಪುತ್ರಿ ಕೀರ್ತನ (16)ಸಾವನ್ನಪ್ಪಿರುವ ಯುವತಿ. ಖಾಸಗಿ ಕಾಲೇಜೊಂದರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಕೀರ್ತನ ಪ್ರತೀ ದಿನ ಕಾಲೇಜಿನಿಂದ ಮನೆಗೆ ತಡವಾಗಿ ಬರುತ್ತಿದ್ದಳು ಎನ್ನಲಾಗಿದೆ. ನಿನ್ನೆ ಸಂಜೆ ತಡವಾಗಿ ಬಂದ ಮಗಳನ್ನು ತಂದೆ ಪ್ರಶ್ನಿಸಿದ್ದಾರೆ. ಇದಕ್ಕೆ ಕೋಪಗೊಂಡ ಕೀರ್ತನ ಪೋಷಕರನ್ನು ಹೆದುರಿಸುವ ಸಲುವಾಗಿ ಆತ್ಮಹತ್ಯೆಗೆ ಶರಣಾಗುವೆ ಎಂದು ಹೇಳಿ ನೇಣು ಬಿಗಿದುಕೊಂಡಿದ್ದಾಳೆ. ತಕ್ಷಣ ತಂದೆ ನೇಣಿನ ಕುಣಿಕೆಯಿಂದ ಮಗಳನ್ನು ಬಿಡಿಸುವಷ್ಟರಲ್ಲಿ ಆಕೆ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Eesanje News 24/7 ನ್ಯೂಸ್ ಆ್ಯಪ್ – Click Here to Download
Facebook Comments