ಕಲ್ಲಿದ್ದಲು ಹಗರಣ : ಜಿಂದಾಲ್. ದಾಸರಿ ವಿರುದ್ಧ ಸಿಬಿಐ ಅಂತಿಮ ವರದಿ ಸಲ್ಲಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Coal-Scam

ನವದೆಹಲಿ, ಜ.13-ಕಾಂಗ್ರೆಸ್ ನಾಯಕ ಮತ್ತು ಉದ್ಯಮಿ ನವೀನ್ ಜಿಂದಾಲ್, ಕಲ್ಲಿದ್ದಲು ಖಾತೆ ಮಾಜಿ ಸಚಿವ ದಾಸರಿ ನಾರಾಯಣ ರಾವ್ ಹಾಗೂ ಇತರರ ವಿರುದ್ಧದ ಕಲ್ಲಿದ್ದಲು ಪ್ರಕರಣದಲ್ಲಿ ವಿಶೇಷ ನ್ಯಾಯಾಲಯದ ಸೂಚನೆ ಮೇರೆಗೆ ಮತ್ತಷ್ಟು ತನಿಖೆ ನಡೆಸಿರುವ ಕೇಂದ್ರೀಯ ತನಿಖಾ ದಳ-ಸಿಬಿಐ ಇಂದು ಅಂತಿಮ ವರದಿ ಸಲ್ಲಿಸಿದೆ.  ಆದಾಗ್ಯೂ, ಸೂಕ್ತ ನಮೂನೆಯಲ್ಲಿ ವರದಿಯನ್ನು ಸಲ್ಲಿಸದ ಕಾರಣ ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ನ್ಯಾಯಾಧೀಶ ಭರತ್ ಪರಶರ್, ಜ.23ರೊಳಗೆ ಸರಿಯಾದ ನಮೂನೆಯಲ್ಲಿ ವರದಿಯನ್ನು ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದ್ದಾರೆ. ಸಿಎಫ್‍ಎಸ್‍ಎಲ್ ವರದಿಗಳು, ಸಾಕ್ಷಿಗಳ ಪಟ್ಟಿ ಮತ್ತು ಸಿಬಿಐನಿಂದ ದಾಖಲಿಸಿಕೊಂಡಿರುವ ಅವರ ಹೇಳಿಕೆಗಳು ಈ ವರದಿಯಲ್ಲಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin