ಹನಿಟ್ರ್ಯಾಪ್ ಪ್ರಕರಣ : ಮೂವರು ಮಹಿಳೆಯರನ್ನು ವಶಕ್ಕೆ ಪಡೆದ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

Honey-Trap
ಬೆಂಗಳೂರು,ಜ.13- ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮಹಿಳೆಯರನ್ನು ವಿಜಯನಗರ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ ಮಾಜಿ ಕಾರ್ಪೊರೇಟರೊಬ್ಬರ ಸ್ನೇಹಿತ ಆನಂದ್ ಆಚಾರಿ ಮತ್ತು ರವಿಕುಮಾರ್ ಎಂಬಾತನನ್ನು ಬಂಧಿಸಲಾಗಿದ್ದು,  ಇವರಿಂದ ಮತ್ತಷ್ಟು ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ.  ಈ ಪ್ರಕರಣದಲ್ಲಿ ಮಹಿಳೆಯರ ಪಾತ್ರವೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಬಂತ ಆರೋಪಿಗಳು ನಾಲ್ವರಿಗೆ ವಂಚಿಸಿರುವುದು ತಿಳಿದುಬಂದಿದೆ. ಇವರಷ್ಟೆ ಅಲ್ಲದೆ ಹಲವಾರು ಮಂದಿಗೆ ಬ್ಲ್ಯಾಕ್‍ಮೇಲ್ ಮಾಡಿ ಲಕ್ಷಾಂತರ ಹಣ ವಸೂಲಿ ಮಾಡಿದ್ದಾರೆಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.

ಈವರೆಗೂ ಯಾವ್ಯಾವ ವ್ಯಕ್ತಿಗಳಿಗೆ ಹನಿಟ್ರ್ಯಾಪ್ ಮೂಲಕ ವಂಚನೆ ಮಾಡಿ ಹಣ ದೋಚಿದ್ದಾರೆ ಎಂಬ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.   ಬಂತ ಆರೋಪಿಗಳು ಮಾರೇನಹಳ್ಳಿಯ 11ನೇ ಮುಖ್ಯರಸ್ತೆಯಲ್ಲಿ ಕಾರ್ಪೊರೇಟರೊಬ್ಬರು ಬಿಬಿಎಂಪಿ ಕಚೇರಿ ಮೇಲೆ ಎನ್‍ಜಿಒ ಟ್ರಸ್ಟ್ ಎಂಬ ನಾಮಫಲಕ ಹಾಕಿಕೊಂಡು ಲೊಕ್ಯಾಂಟೊ ಎಂಬ ವೆಬ್‍ಸೈಟ್ ಮೂಲಕ ಈ ದಂಧೆ ನಡೆಸುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.  ಕಳೆದ ಒಂದೂವರೆ ತಿಂಗಳಿನಿಂದ ಈ ದಂಧೆ ನಡೆಸುತ್ತಿದ್ದುದ್ದನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಇದುವರೆಗೂ ಹಲವಾರು ವ್ಯಕ್ತಿಗಳನ್ನು ತಮ್ಮ ಜಾಲದಲ್ಲಿ ಬೀಳಿಸಿಕೊಂಡು ಕ್ರೆಡಿಟ್, ಡಿಬಿಟ್ ಕಾರ್ಡ್‍ಗಳ ಮೂಲಕ ತಮ್ಮ ಖಾತೆಗೆ ಹಣ ವರ್ಗಾಯಿಸಿಕೊಂಡಿರುವ ಮಾಹಿತಿಯನ್ನೂ ಸಹ ಪೊಲೀಸರು ಕಲೆಹಾಕಿದ್ದಾರೆ.

ಈ ಪ್ರಕರಣದಲ್ಲಿ ಯಾರ್ಯಾರು ಭಾಗಿಯಾಗಿದ್ದರು, ಯಾವ ಯಾವ ಸ್ಥಳದಲ್ಲಿ ವ್ಯಕ್ತಿಗಳನ್ನು ವಂಚಿಸಿದ್ದಾರೆ ಎಂಬ ಬಗ್ಗೆಯೂ ತನಿಖೆ ಮುಂದುವರೆದಿದೆ.  ಹನಿಟ್ಯಾಪ್ ಪ್ರಕರಣದಲ್ಲಿ ಸಿಲುಕಿ ಹಣ ಕಳೆದುಕೊಂಡ ವ್ಯಕ್ತಿಗಳು ಹೆದರಿ ದೂರು ನೀಡಲು ಮುಂದಾಗಿರುವುದಿಲ್ಲ ಈ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin