ಹೊಸಹಳ್ಳಿ ನರಸಿಂಹಮೂರ್ತಿ ನಿಧನಕ್ಕೆ ಸಂತಾಪ

ಈ ಸುದ್ದಿಯನ್ನು ಶೇರ್ ಮಾಡಿ

nanjanagudu

ನಂಜನಗೂಡು, ಜ.13- ರಸ್ತೆ ಅಪಘಾತದಲ್ಲಿ ನಿಧನರಾದ ಹೊಸಹಳ್ಳಿಯ ಕಾಂಗ್ರೆಸ್‍ನ ಹಿರಿಯ ಮುಖಂಡ, ಹೊಸಹಳ್ಳಿ ನರಸಿಂಹಮೂರ್ತಿ (55) ಅವರ ಸ್ವಗ್ರಾಮದಲ್ಲಿ ನಿನ್ನೆ ಅಂತ್ಯಕ್ರಿಯೆ ನೆರವೇರಿತು.ನರಸಿಂಹಮೂರ್ತಿ ಟಿವಿಎಸ್‍ನಲ್ಲಿ ತೆರಳುತ್ತಿದ್ದಾಗ ಅಕ್ಷಯ್ ಬಾರ್ ಮುಂಭಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡ್ಲುಪೇಟೆ ಕಡೆ ಹೋಗುತ್ತಿದ್ದ ಇನೋವಾ ಕಾರ್ ಹಿಂಬದಿಯಿಂದ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ತೀವ್ರ ಪೆಟ್ಟಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಮೃತ ನರಸಿಂಹಮೂರ್ತಿರವರು ಪತ್ನಿ 5 ಹೆಣ್ಣು ಮಕ್ಕಳು ಓರ್ವ ಪುತ್ರನನ್ನು ಸೇರಿದಂತೆ ಅಪಾರ ಬಂದುಬಳಗವನ್ನು ಅಗಲಿದ್ದಾರೆ.

ಮೈಸೂರು ಜಿಲ್ಲಾ ಉಸ್ತುವಾರಿಸಚಿವ ಡಾ.ಹೆಚ್.ಸಿ. ಮಹದೇವಪ್ಪರವರ ಸಂಬಂಧಿಯಾಗಿದ್ದು , ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ 2 ದಶಕ ಕಾಲ ಪಕ್ಷಕ್ಕಾಗಿ ದುಡಿದು ಸರಳತೆಗೆ ಹೆಸರುವಾಸಿಯಾಗಿದ್ದರು.ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಸಂಸಧ ಆರ್.ಧೃವನಾರಾಯಣ, ರಾಜ್ಯ ಎಸ್.ಸಿ.ಘಟಕದ ಅಧ್ಯಕ್ಷ ಎನ್. ಮಂಜುನಾಥ್, ಮಾಜಿ ಮೂಡಾ ಅಧ್ಯಕ್ಷ ಕೆ.ಆರ್, ಮೋಹನ್‍ಕುಮಾರ್, ತಾಲ್ಲೂಕು ಜೆ.ಡಿ.ಎಸ್.ಅಧ್ಯಕ್ಷ ಕಳಲೆ ಕೇಶವಮೂರ್ತಿ, ಎನ್.ನರಸಿಂಹಸ್ವಾಮಿ ಕಾಂಗ್ರೆಸ್ ಮುಖಂಡ ಇಂದನ ಬಾಬು, ಅಪಾರ ಜನಸ್ತೋಮ ಮತ್ತು ಸ್ನೇಹಿತರು ಅಂತ್ಯೆಕ್ರಿಯೆಯಲ್ಲಿ ಪಾಲ್ಗೊಂಡು ಸಂತಾಪ ಸೂಚಿಸಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin